Thursday, August 20, 2026

BDA Apartments

Home Front Page ಏಪ್ರಿಲ್ 9ರಿಂದ ಐಪಿಎಲ್ ಹವಾ ಶುರು: ಆರಂಭಿಕ ಪಂದ್ಯಗಳಲ್ಲಿ ಇರಲ್ಲ ಸ್ಟಾರ್ ಪ್ಲೆಯರ್ಸ್

ಏಪ್ರಿಲ್ 9ರಿಂದ ಐಪಿಎಲ್ ಹವಾ ಶುರು: ಆರಂಭಿಕ ಪಂದ್ಯಗಳಲ್ಲಿ ಇರಲ್ಲ ಸ್ಟಾರ್ ಪ್ಲೆಯರ್ಸ್

ಬೆಂಗಳೂರು, ಏಪ್ರಿಲ್ 1, 2021 (www.justkannada.in): ಬಹು ನಿರೀಕ್ಷೆಯ ಐಪಿಎಲ್ 14ನೇ ಸೀಸನ್ ಎಪ್ರಿಲ್ 9ರಿಂದ ಆರಂಭವಾಗಲಿದೆ.

ಟೂರ್ನಿಯ ಆರಂಭದಲ್ಲಿ ಸ್ಟಾರ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಕಾಗಿಸೊ ರಬಾಡ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇವರ ಜತೆಗೆ ಮತ್ತಷ್ಟು ಸ್ಟಾರ್ ಪ್ಲೆಯರ್ಸ್ ನಾನಾ ಕಾರಣಗಳಿಂದಾಗಿ ಮೈದಾನಕ್ಕಿಳಿಯುತ್ತಿಲ್ಲ.

ಮುಂದಿನ ವಾರ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯ ಆತಿಥ್ಯವಹಿಸಲಿದ್ದು, ಎಲ್ಲ ಪ್ರಮುಖ ಆಟಗಾರರು ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಆರಂಭದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೆಲವು ಪ್ರಮುಖ ಬೌಲರ್‌ಗಳ ಸೇವೆಯಿಂದ ವಂಚಿತವಾಗಲಿದೆ. ಆಡಮ್ ಝಾಂಪ ವಿವಾಹವಾಗುತ್ತಿರುವ ಕಾರಣ ಟೂರ್ನಿಯ ಆರಂಭದಲ್ಲಿ ಆರ್‌ಸಿಬಿ ತಂಡದಲ್ಲಿರುವುದಿಲ್ಲ.

ಮಿಚೆಲ್ ಮಾರ್ಚ್ ಹೈದರಾಬಾದ್ ತಂಡದ ಭಾಗವಾಗಿರುವುದಿಲ್ಲ. ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಮೊದಲ ನಾಲ್ಕು ಪಂದ್ಯಗಳು ಮುಗಿದ ಬಳಿಕ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.