ಒಂದೇ ದಿನದಲ್ಲಿ ದೇಶದಲ್ಲಿ 72,330 ಮಂದಿಗೆ ಕೊರೋನಾ ಪಾಸಿಟಿವ್…

kannada t-shirts

ನವದೆಹಲಿ, ಏಪ್ರಿಲ್,1,2021(www.justkannada.in):  ದೇಶದಲ್ಲಿ ಇತ್ತೀಚೆಗೆ ಕೊರೋನಾ 2ನೇ ಅಲೆ ಆರಂಭವಾಗಿದ್ದು ದಿನೇ ದಿನೇ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಹೌದು ಕಳೆದ 24 ಗಂಟೆಗಳಲ್ಲಿ  72,330 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.  ಒಂದೇ ದಿನದಲ್ಲಿ  72,330 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  ಈ ಮೂಲಕ ಸೋಂಕಿತರ ಸಂಖ್ಯೆ 1,22,21,665ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿಗೆ 459 ಮಂದಿ ಬಲಿಯಾಗಿದ್ದಾರೆ.  ಈ ಮೂಲಕ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,62,927ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,84,055ಕ್ಕೆ ಏರಿಕೆಯಾಗಿದೆ. 1,22,21,665 ಮಂದಿ ಒಟ್ಟಾರೆ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 40,382 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 1,14,74,683ಕ್ಕೆ ತಲುಪಿದೆ.

Corona positive -72,330 people - country - single day
ಕೃಪೆ- internet

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿಲಾಗಿದೆ. ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ಹಾಕಲಾಗುತ್ತಿದೆ.

ENGLISH SUMMARY….

72,330 people test Corona positive in India in a single day
New Delhi, Apr. 1, 2021 (www.justkannada.in): The second wave of the Coronavirus has started sweeping the country, as a result of which the number of COVID patients is increasing constantly. As many as 72,330 people across the country have tested positive in the last 24 hours.
The Union Health and Family Welfare Ministry have provided the details. The total number of cases has increased to 1,22,21,665 and 459 people have died due to the pandemic in the last 24 hours. With this, the total number of deceased due to Coronavirus in the country has increased to 1,62,927.

Corona positive -72,330 people - country - single day
ಕೃಪೆ- internet

The number of active cases has increased to 5,84,055, whereas out of the 1,22,21,665 infected people 40,382 of them have been cured in the last 24 hours. With this, the total number of patients who are cured of the infection has reached 1,14,74,683.
COVID vaccination is being given to all those who are 45 of age and above from today.
Keywords: COVID-19 Pandemic/ Vaccination/ 72,330 cases in a single day

Key words: Corona positive -72,330 people – country – single day

 

website developers in mysore