Saturday, August 8, 2026

BDA Apartments

Home Front Page ಮುಂದಿನ ಬಾರಿ ಚಿಕ್ಕಬಳ್ಳಾಪುರದಲ್ಲಿ ನಾವು ಕನಿಷ್ಟ 4 ಸ್ಥಾನ ಗೆಲ್ಲಬೇಕು-ಸಚಿವ  ಡಾ. ನಾರಾಯಣಗೌಡ ಕರೆ….

ಮುಂದಿನ ಬಾರಿ ಚಿಕ್ಕಬಳ್ಳಾಪುರದಲ್ಲಿ ನಾವು ಕನಿಷ್ಟ 4 ಸ್ಥಾನ ಗೆಲ್ಲಬೇಕು-ಸಚಿವ  ಡಾ. ನಾರಾಯಣಗೌಡ ಕರೆ….

ಚಿಕ್ಕಬಳ್ಳಾಪುರ ಮಾರ್ಚ್,31,2021(www.justkannada.in):  ಹಿಂದಿನ ಬಾರಿಗೆ ಜಿಲ್ಲೆಗೆ ಬಂದಾಗ ಕೊರೊನಾ ಕಾರಣದಿಂದಾಗಿ ಪಕ್ಷದ ಕಚೇರಿಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಪಕ್ಷದ ಕಚೇರಿಗ ಬಂದು ತುಂಬ ಖುಷಿಯಾಗಿದೆ. ಬಿಜೆಪಿಗೆ ಬಂದು ಬಹಳ ಖುಷಿಯಾಗಿದೆ. ಶಿಸ್ತಿನ ಪಕ್ಷ ಇದು. ಹಿಂದಿನಿಂದ ಅದೇ ರೀತಿಯ ಶಿಸ್ತನ್ನು ಬೆಳೆಸಿಕೊಂಡು ಬಂದಿದ್ದಾರೆ. ನಮ್ಮದೇಶದಲ್ಲಿ ನಮಗೇ ಸ್ವಾತಂತ್ರ್ಯ ಇರಲಿಲ್ಲ. ಮೋದಿಯವರಿಂದ ಅದು ಸಾಧ್ಯವಾಗಿದೆ. ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ದೇಶವನ್ನೆ ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ನಾವೆಲ್ಲ ಶ್ರಮಿಸೋಣ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ ಹೇಳಿದರು.Illegally,Sand,carrying,Truck,Seized,arrest,driver

ಚಿಕ್ಕಬಳ್ಳಾಪುರದಲ್ಲಿ ಪ್ರಗತಿ ಪರಿಶೀಲನಾ ಸಭೆ ಮುಗಿಸಿ, ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಸಚಿವ ನಾರಾಯಣಗೌಡ,  ಜಿಲ್ಲೆಯಲ್ಲಿ  ಡಾ. ಸುಧಾಕರ್ ಅವರು ಬಿಜೆಪಿಗೆ ಬಂದ ಮೇಲೆ ಪಕ್ಷಕ್ಕೆ ಆನೆ ಬಲಬಂದಿದೆ. ಮುಂದಿನ ಚುನಾವಣೆಯಲ್ಲಿ ಕನಿಷ್ಟ 4 ಕ್ಷೇತ್ರವನ್ನು ನಾವು ಗೆಲ್ಲಬೇಕು. ಸರ್ಕಾರದ ಅಭಿವೃದ್ಧಿ ಕೆಲಸದ ಜೊತೆಗೆ ಕಾರ್ಯಕರ್ತರ ಶ್ರಮ ಸೇರಿದರೆ ಚಿಕ್ಕಬಳ್ಳಾಪುರ ಜಿಲ್ಲೆ ಸಂಪೂರ್ಣ ಕೇಸರಿಮಯ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಯಾವುದೇ ಪಕ್ಷಕ್ಕು ಇಂತ ನಿಷ್ಟಾವಂತ ಕಾರ್ಯಕರ್ತರು ಇರಲು ಸಾಧ್ಯವಿಲ್ಲ. ಅದೇ ಕಾರಣದಿಂದ ನಮ್ಮ ಪಕ್ಷವೂ ಸಹ ಪ್ರತಿಯೊಬ್ಬ ಕಾರ್ಯಕರ್ತರನನ್ನು ಗುರುತಿಸುತ್ತದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಸಹ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದು ಸಚಿವ ನಾರಾಯಣಗೌಡ ಹೇಳಿದರು. next-time-win-at-least-4-seats-chikkaballapur-minister-narayana-gowda

ಈ ಸಂದರ್ಭದಲ್ಲಿ ಸಚಿವರು ಪಕ್ಷದ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಪ್ರದಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರ ಅಧ್ಯಕ್ಷ ಶ್ರೀನಿವಾಸ್, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Key words: Next time – win -at least 4 seats –Chikkaballapur-Minister – Narayana Gowda.