Tuesday, September 22, 2026

BDA Apartments

Home Cinema ‘ಸಾಹೋ’ ಪ್ರಭಾಸ್ ಜೊತೆ ಜಾಕ್ವೆಲಿನ್ ಸ್ಪೆಷಲ್ ಡ್ಯಾನ್ಸ್ !

‘ಸಾಹೋ’ ಪ್ರಭಾಸ್ ಜೊತೆ ಜಾಕ್ವೆಲಿನ್ ಸ್ಪೆಷಲ್ ಡ್ಯಾನ್ಸ್ !

ಮುಂಬೈ, ಜುಲೈ 07, 2019 (www.justkannada.in):ಪ್ರಭಾಸ್ ಅಭಿನಯದ ಸಾಹೊ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರ ತಂಡಕ್ಕೆ ಈಗ ಜಾಕ್ವೆಲಿನ್ ಕೂಡ ಸೇರಿಕೊಂಡಿದ್ದಾರೆ.

ಹೌದು. ಈಗಾಗಲೇ ಟೀಸರ್, ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಕುತೂಹಲ ಮೂಡಿಸಿರುವ ಸಾಹೊ ಮುಂದಿನ ತಿಂಗಳು ತೆರೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಪ್ರಭಾಸ್ ನಾಯಕಿಯಾಗಿ ಶ್ರದ್ಧಾ ಕಪೂರ್ ಬಣ್ಣ ಹಚ್ಚಿದ್ದಾರೆ. ಇದರ ಜತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿ ಕೊಟ್ಟಿದ್ದಾರೆ. ಜಾಕ್ವೆಲಿನ್ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಹಾಡಿನ ಚಿತ್ರೀಕರಣ ಆಸ್ಟ್ರೀಯದಲ್ಲಿ ನಡೆಯುತ್ತಿದೆ.