Saturday, August 15, 2026

BDA Apartments

Home Front Page “ಮೈಸೂರು ನಗರಕ್ಕೆ ಚಿತ್ರನಗರಿ ಸ್ಥಳಾಂತರ: ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ”

“ಮೈಸೂರು ನಗರಕ್ಕೆ ಚಿತ್ರನಗರಿ ಸ್ಥಳಾಂತರ: ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ”

ಮೈಸೂರು,ಮಾರ್ಚ್,18,2021(www.justkannada.in) : ಮೈಸೂರು ನಗರಕ್ಕೆ ಚಿತ್ರನಗರಿ ಸ್ಥಳಾಂತರಿಸುವುದನ್ನು ಸ್ವಾಗತಿಸಿ ಜಗನ್ಮೋಹನ ಅರಮನೆ ಮುಂಭಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾವಚಿತ್ರ ಹಿಡಿದು ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ಹಾಗೂ ಪಾತಿ ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.jkಈ ಸಂದರ್ಭ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ  ಮಾತನಾಡಿ, ಮುಖ್ಯಮಂತ್ರಿಗಳಿಗೆ ಪ್ರವಾಸೋದ್ಯಮದ ಪರವಾಗಿ, ಕಲಾವಿದರ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. ಚಿತ್ರನಗರಿ ಈಗಾಗಲೇ ಪ್ರಾರಂಭವಾಗಬೇಕಿತ್ತು. ಕೆಲವು ರಾಜಕಾರಣದ ಷಡ್ಯಂತ್ರದಿಂದ ಬದಲಾದ ಸರ್ಕಾರಗಳು, ಬದಲಾದ ಪರಿಸ್ಥಿತಿಯಿಂದ ವಿಳಂಬವಾಗಿದೆ ಎಂದರು.

city-Mysore-Picture City-Displacement-public-Share-sweet 

ಮೈಸೂರು ಮಹಾರಾಜರ ಕೊಡುಗೆಯಾಗಿದ್ದು, ನಮ್ಮ ಮೈಸೂರಿನಲ್ಲಿ ಚಿತ್ರನಗರಿಯಾದರೆ ವೇಗವಾಗಿ ಮೈಸೂರು ಸಹ ಬೆಳೆಯುತ್ತದೆ. ಹೀಗಾಗಿ, ಚಿತ್ರ ನಗರಿಯ ಗುದ್ದಲಿ ಪೂಜೆ ಕಾಮಗಾರಿ ಬೇಗ ಆಗಬೇಕೆಂದು ಸರ್ಕಾರದಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಮುಡಾ ಸದಸ್ಯ ನವೀನ್ ಕುಮಾರ್, ಬಿಜೆಪಿ ಮುಖಂಡ ಪರಮೇಶ್ ಗೌಡ, ಟಿ.ಎಸ್.ಅರುಣ್ ಇನ್ನಿತರರು ಹಾಜರಿದ್ದರು.,

key words : city-Mysore-Picture City-Displacement-public-Share-sweet