ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನ : ಪರಿಸರ ಜಾಗೃತಿ ಸೈಕಲ್ ಅಭಿಯಾನ

ಮೈಸೂರು,ಮಾರ್ಚ್,18,2021(www.justkannada.in) :  ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ಮಾರ್ಚ್ 20ರಂದು ಪರಿಸರ ಜಾಗೃತಿ ಸೈಕಲ್ ಅಭಿಯಾನ ಆಯೋಜಿಸಿದೆ.

jk

ಅಂದು ಬೆಳಗ್ಗೆ 7ರಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುಕ್ಕರಹಳ್ಳಿ ಕೆರೆಯವರೆಗೆ ಸೈಕಲ್ ಅಭಿಯಾನ ನಡೆಯಲಿದ್ದು, ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳನ್ನು ಬಿಸಿಲಿನ ತಾಪಮಾನದಿಂದ ಸಂರಕ್ಷಿಸಲು ಆಹಾರ ನೀರು ಒದಗಿಸುವಂತೆ ನಾಗರೀಕರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿ ನಡೆಸಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ವಿವರಿಸಿದ್ದಾರೆ.

ಇಂದು ಬೇಸಿಗೆ ಪ್ರಾರಂಭದಿಂದ ತಾಪಮಾನ ಹೆಚ್ಚಾಗುತ್ತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳ ಪರಿಸರ ವ್ಯಾಪಾರಸ್ಥರು, ಉದ್ಯಾನಗಳಲ್ಲಿ ಹಿರಿಯ ನಾಗರೀಕರು ಮಹಿಳೆಯರ ಪರಿಸರ ಸಮಿತಿ, ಬಡಾವಣೆಗಳಲ್ಲಿ ಮನೆಗಳ ಮುಂದೆ ತಾರಸಿಯ ಮೇಲೆ ಆಹಾರ ನೀರು ಇಡಲು ಪರಿಸರ ಯುವಕರ ಸಮಿತಿ ರಚಿಸಲಾಗಿದೆ ಎಂದರು.

ಪರಿಸರ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುವ ಆಸಕ್ತ ಸ್ವಯಂಸೇವಕರು 9880752727 ಮತ್ತು 8105078070 ಸಂಪರ್ಕ ಮಾಡಿ ಉಚಿತವಾಗಿ ನೊಂದಾಯಿಸಿಕೊಳ್ಳಬಹುದು. ಕೋವಿಡ್ ನಿಯಂತ್ರಣಾ ಸರ್ಕಾರದ ನಿಯಾಮಾನುಸಾರ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಭಿಯಾನದಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪರಿಸರ ಜಾಗೃತಿ ಸೈಕಲ್ ಅಭಿಯಾನ 

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಲಿರುವ  ಪರಿಸರ ಜಾಗೃತಿ ಸೈಕಲ್ ಅಭಿಯಾನ ಜಯಚಾಮರಾಜೇಂದ್ರ ವೃತ್ತದ ಮಾರ್ಗವಾಗಿ ಚಾಮರಾಜ ಜೋಡಿ ರಸ್ತೆಯ ಮೂಲಕ ರಾಮಸ್ವಾಮಿ ವೃತ್ತ ಮಹರಾಜ ಕಾಲೇಜು ಮೈದಾನ ಕೌಟಿಲ್ಯ ವೃತ್ತ ಸಾಗಿ ಕುಕ್ಕರಹಳ್ಳಿಕೆರೆ ತಲುಪಲಿದೆ ಎಂದಿದ್ದಾರೆ.

ಪರಿಸರ ಜಾಗೃತಿ ಸೈಕಲ್ ಅಭಿಯಾನಕ್ಕೆ ಅತಿಥಿಗಳಾಗಿ ಡಿಸಿಪಿ. ಪ್ರಕಾಶ್ ಗೌಡ, ರಂಗಕರ್ಮಿ ಮಂಡ್ಯ ರಮೇಶ್, ಸುಯೋಗ್ ಆಸ್ಪತ್ರೆ ವ್ಯವಸ್ಥಾಪಕ ಡಾ.ಎಸ್.ಪಿ.ಯೋಗಣ್ಣ, ಅಂಬಾರಿ ಕನ್ವೆನ್ಷನ್ ಹಾಲ್ ಮಾಲೀಕ ಸ್ವೀಟ್ ಮಹೇಶ್, ಪರಿಸರ ಶಿಕ್ಷಣ ತಜ್ಞ ಸಪ್ತ ಗಿರೀಶ್, ಕರ್ನಾಟಕ ರಾಜ್ಯ ವನ್ಯಜೀವಿ ಸಂಸ್ಥೆಯ ಸದಸ್ಯ ಜಿ.ಮಲ್ಲೇಶಪ್ಪ,  ಮೈಸೂರು ನಗರ ವನ್ಯಜೀವಿ ಸಂಸ್ಥೆಯ ಡಾ.ಸಂತೃಪ್ತ್ , ಉರಗ ತಜ್ಞ ಸ್ನೇಕ್ ಶ್ಯಾಮ್, ಬಂಡಿಪುರ ಅರಣ್ಯ ವನ್ಯಜೀವಿ ಮುಖಂಡರಾದ ಎನ್.ಎಮ್.ನವೀನ್ ಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ನಗರ ಪಾಲಿಕಾ ಸದಸ್ಯ ಕೆ.ವಿ.ಶ್ರೀಧರ್, ಸಮಾಜಸೇವಕ ಕೆ.ರಘುರಾಮ್ ವಾಜಪೇಯಿ, ಡಿಟಿಎಸ್ ಫೌಂಡೇಶನ್ ಡಿ.ಟಿ.ಪ್ರಕಾಶ್ ಸೇರಿದಂತೆ ಇನ್ನಿತರರು ಭಸವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

March 20th,World,Sparrow,Day,Environmental,Awareness,Cycle,Campaign

ಪತ್ರಿಕಾಗೋಷ್ಠಿಯಲ್ಲಿ ಪರಿಸರ ಪ್ರೇಮಿ ಎನ್.ಎಂ.ನವೀನ್ ಕುಮಾರ್,  ಜೀವಧಾರ ರಕ್ತನಿಧಿ ಕೇಂದ್ರದ ಎಸ್.ಇ.ಗಿರೀಶ್, ಕೆಎಂಪಿಕೆ ಟ್ರಸ್ಟ್ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ಇದ್ದರು.

key words : March 20th-World-Sparrow-Day-Environmental-Awareness-Cycle-Campaign