Saturday, August 8, 2026

BDA Apartments

Home Front Page ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ: ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ…

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ: ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ…

ಬರ್ಮಿಂಗ್‌ಹ್ಯಾಮ್, ಜುಲೈ 2,2019(www.justkannada.in):  ಇಂಗ್ಲೆಂಡ್ ವಿರುದ್ಧ  ಗೆಲ್ಲುವ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ಇಂದು ಬಾಂಗ್ಲಾದೇಶವನ್ನ ಎದುರಿಸುತ್ತಿದ್ದು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.

ಇಂಗ್ಲೇಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪಂದ್ಯ ನಡೆಯುತ್ತಿದ್ದು  ಇನ್ನೂ ಸೆಮಿಫೈನಲ್ ಆಸೆಯನ್ನು ಉಳಿಸಿಕೊಂಡಿರುವ ಬಾಂಗ್ಲಾಕ್ಕೆ  ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಕೊಹ್ಲಿ ಬಳಗ ಐಸಿಸಿ ವಿಶ್ವಕಪ್ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ 2ನೇ ತಂಡವಾಗಿ ಗುರುತಿಸಿಕೊಳ್ಳಲಿದೆ,

ಭಾರತ ತಂಡದಲ್ಲಿ  ಎರಡು ಬದಲಾವಣೆ ಮಾಡಲಾಗಿದ್ದು, ಕೇದರ್ ಜಾಧವ್ ಬದಲು ದಿನೇಶ್ ಕಾರ್ತಿಕ್ ಗೆ  ಹಾಗೂ ಸ್ಪಿನ್ನರ್ ಕುಲ್ ದೀಪ್ ಯಾದವ್ ಬದಲು ಭುವನೇಶ್ವರ್ ಕುಮಾರ್ ಗೆ ಸ್ಥಾನ ನೀಡಲಾಗಿದೆ.

Key words: cricket-worldcup2019- India- won  toss -elected – bat.