Tuesday, August 11, 2026

BDA Apartments

Home Crime ರಸ್ತೆ ಅಪಘಾತ:  ಅಸ್ಸಾಂನಲ್ಲಿ ಮೈಸೂರು ಮೂಲದ ಯೋಧ ಸಾವು…

ರಸ್ತೆ ಅಪಘಾತ:  ಅಸ್ಸಾಂನಲ್ಲಿ ಮೈಸೂರು ಮೂಲದ ಯೋಧ ಸಾವು…

ಮೈಸೂರು,ಮಾರ್ಚ್,1,2021(www.justkannada.in): ಅಸ್ಸಾಂ ರಾಜ್ಯದಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ.jk

ಬಿಎಸ್‌ಎಫ್ ಬ್ಯಾಟಾಲಿಯನ್‌ ನಲ್ಲಿ ಪೇದೆ ಮೋಹನ್(34) ಮೃತಪಟ್ಟವರು.ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಸಮೀಪದ ಬೆಟ್ಟಹಳ್ಳಿ ಗ್ರಾಮದ ನಿವಾಸಿಯಾಗಿರುವ ಮೋಹನ್ ಸೇನೆಗೆ ಸೇರಿ 10 ವರ್ಷ ಪೂರೈಸಿದ್ದರು. ಮೋಹನ್ ಹೈವೇ ಪೆಟ್ರೋಲಿಂಗ್‌ ಕರ್ತವ್ಯ ನಿರ್ವಹಿಸುತ್ತಿದ್ದರು.Road accident-Assam- Mysore- Soldier-death

ಈ ನಡುವೆ ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಮೋಹನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೋಹನ್  ಪೋಷಕರು ಮೃತದೇಹದ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಮೋಹನ್ ಅವರಿಗೆ ಎರಡು ವರ್ಷದ ಹಿಂದಷ್ಟೇ ಮದುವೆಯಾಗಿತ್ತು.

Key words: Road accident-Assam- Mysore- Soldier-death