Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಮೂವರು ಕುಖ್ಯಾತ ಮನೆಗಳ್ಳರ ಬಂಧನ: ಚಿನ್ನಾಭರಣ, ಕಾರು ವಶಕ್ಕೆ….

ಮೂವರು ಕುಖ್ಯಾತ ಮನೆಗಳ್ಳರ ಬಂಧನ: ಚಿನ್ನಾಭರಣ, ಕಾರು ವಶಕ್ಕೆ….

ಮೈಸೂರು,ಫೆಬ್ರವರಿ,25,2021(www.justkannada.in): ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಕುಖ್ಯಾತ ಮನೆಗಳ್ಳರನ್ನ ಬಂಧಿಸಿ ಚಿನ್ನಾಭರಣ, ಕಾರು ಮತ್ತು ರಿವಾಲ್ವಾರ್ ವಶಕ್ಕೆ ಪಡೆದಿದ್ದಾರೆ.jk

ದಿಲೀಪ್ ಕುಮಾರ್ (38), ಮಂಜ (35), ರಾಜೇಂದ್ರ (29) ಬಂಧಿತ ಆರೋಪಿಗಳು. ಬಂಧಿತರಿಂದ 21,47,500 ಮೌಲ್ಯದ 391 ಗ್ರಾಂ ತೂಕದ ಚಿನ್ನಾಭರಣ, ಒಂದು ಕಾರು ಮತ್ತು ವಿದೇಶಿ ನಿರ್ಮಿತ ರಿವಾಲ್ವರ್ ಜೊತೆ 6 ಸಜೀವ ಗುಂಡುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮ್ಮ ಬಳಿ ಇದ್ದ ರಿವಾಲ್ವರ್ ಮಾರಾಟ ಮಾಡುವ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆರೋಪಿಗಳ ವಿಚಾರಣೆ ಬಳಿಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಕುವೆಂಪುನಗರ, ವಿಜಯನಗರ, ಅಶೋಕಪುರಂ, ಬೆಂಗಳೂರಿನ ಬಾಣಸವಾಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.arrest-three-thief-mysore-police

ಡಿಸಿಪಿ ಗೀತಾಪ್ರಸನ್ನ ಹಾಗೂ ಕೃಷ್ಣರಾಜ ವಿಭಾಗ ಎಸಿಪಿ ಎಂ. ಎಸ್.ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ  ನಡೆದಿದ್ದು, ಕಾರ್ಯಾಚರಣೆಯಲ್ಲಿ ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಜಿ.ಸಿ.ರಾಜು, ಪಿಎಸ್ ಐ ಮಹಾವೀರ್ ಬಿಳಗಿ, ಎಎಸ್ಐ ದೇವಯ್ಯ ಸೇರಿದಂತೆ ಠಾಣಾ ಸಿಬ್ಬಂದಿ ಭಾಗಿಯಾಗಿದ್ದರು.

Key words: arrest -three –thief- mysore- police