Friday, August 7, 2026

BDA Apartments

Home Crime ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ ಪ್ರಕಟ…

ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ ಪ್ರಕಟ…

ಬೆಂಗಳೂರು,ಫೆಬ್ರವರಿ,2,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 8 ವರ್ಷಗಳ ಹಿಂದೆ ನಡೆದಿದ್ದ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ 65ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.jk

ನವೆಂಬರ್ 19, 2013ರಂದು ಕಾರ್ಪೋರೇಷನ್ ಸರ್ಕಲ್ ನಲ್ಲಿನ  ಕಾರ್ಪೋರೇಷನ್ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮ್ಯಾನೇಜರ್ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಅಪರಾಧಿ ಮಧುಕರ್ ರೆಡ್ಡಿ ಹಲ್ಲೆ ಮಾಡಿ  ಹಣ ದೋಚಿಕೊಂಡು ಪರಾರಿಯಾಗಿದ್ದನು.

ಬಳಿಕ ಪ್ರಕರಣ ಸಂಬಂಧ ಆರೋಪಿ ಮಧುಕರ್ ರೆಡ್ಡಿಯನ್ನ ಪೊಲೀಸರು ಬಂಧಿಸಿದ್ದರು.  ಪ್ರಕರಣ ಕುರಿತು ವಿಚಾರಣೆ ನಡೆಸಿದ 65ನೇ ಸಿಸಿಹೆಚ್ ಕೋರ್ಟ್, ನಿನ್ನೆ ಆರೋಪಿ ಮಧುಕರ್ ಶೆಟ್ಟಿ ಅಪರಾಧಿ ಎಂಬುದಾಗಿ ತೀರ್ಪು ನೀಡಿತ್ತು.

woman-assault-atm-accused-madhukar-reddy-sentenced-12-years-jail
ಕೃಪೆ-internet

ಇದೀಗ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ಆರೋಪಿ ಮಧುಕರ್ ಶೆಟ್ಟಿಗೆ  ದರೋಡೆ ಆರೋಪದಡಿ 10 ವರ್ಷ ಜೈಲುಶಿಕ್ಷೆ ಮತ್ತು ಸಾಕ್ಷ್ಯನಾಶ ಯತ್ನ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.

Key words: Woman –assault-ATM-accused-Madhukar Reddy- sentenced – 12 years – jail