Thursday, August 6, 2026

BDA Apartments

Home Front Page “ಪ್ರಿಯಕರನಿಂದ ನಂಬಿಕೆದ್ರೋಹ, ಪ್ರಿಯತಮೆ ನೇಣಿಗೆ ಶರಣು”

“ಪ್ರಿಯಕರನಿಂದ ನಂಬಿಕೆದ್ರೋಹ, ಪ್ರಿಯತಮೆ ನೇಣಿಗೆ ಶರಣು”

ಮೈಸೂರು,ಜನವರಿ,19,2021(www.justkannada.in) : ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟ ಹಿನ್ನೆಲೆ ಪ್ರಿಯತಮೆ ನೇಣಿಗೆ ಶರಣಾಗಿದ್ದಾರೆ. jk

ಮೈಸೂರಿನ ರಾಘವೇಂದ್ರ ನಗರದಲ್ಲಿ ಘಟನೆ ನಡೆದಿದ್ದು, ರಷ್ಮಿ(26) ಮೃತ ದುರ್ದೈವಿಯಾಗಿದ್ದಾರೆ. ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ನಲ್ಲಿ ಪ್ರಿಯಕರ ಅಕ್ಷಿತ್ ಕುಮಾರ್, ಆತನ ತಾಯಿ ಲಕ್ಷ್ಮಿ ಹಾಗೂ ಅಕ್ಷಿತ್ ಕುಮಾರ್ ನ ಹೊಸ ಗರ್ಲ್ ಫ್ರೆಂಡ್ ವರ್ಷಿಣಿ ಹೆಸರು ಉಲ್ಲೇಖಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ರಷ್ಮಿ ಅವರನ್ನು ಅಕ್ಷಿತ್ ಕುಮಾರ್ ಪ್ರತಿದಿನ ಸ್ಕೂಟರ್ ನಲ್ಲಿ ಡ್ರಾಪ್ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ರಷ್ಮಿ ಹಾಗೂ ಅಕ್ಷಿತ್ ಕುಮಾರ್ ಪ್ರೀತಿಸುತ್ತಿದ್ದು ,ಮದುವೆಯಾಗುವುದಾಗಿ ನಂಬಿಸಿದ್ದ ಎಂದು ತಿಳಿದು ಬಂದಿದೆ.boy-Betrayal-girl-Hanging-Surrenderಅಕ್ಷಿತ್ ಕುಮಾರ್ ಕಳೆದ 15 ದಿನಗಳಿಂದ ವರ್ಷಿಣಿ ಎಂಬಾಕೆಯ ಜೊತೆ ಓಡಾಡುತ್ತಿರುವುದು ತಿಳಿದು ಬಂದಿದೆ, ಇದಕ್ಕೆ ಆತನ  ತಾಯಿ ಲಕ್ಷ್ಮಿ ಪ್ರೋತ್ಸಾಹ ನೀಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : boy-Betrayal-girl-HangingSurrender