Tuesday, August 4, 2026

BDA Apartments

Home Front Page ಸ್ವಾಮೀಜಿ ಒಪ್ಪಿದರೇ ಈಗಲೇ ರಾಜೀನಾಮೆಗೆ ಸಿದ್ಧ- ಪ್ರತಿಭಟನೆಯಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ…

ಸ್ವಾಮೀಜಿ ಒಪ್ಪಿದರೇ ಈಗಲೇ ರಾಜೀನಾಮೆಗೆ ಸಿದ್ಧ- ಪ್ರತಿಭಟನೆಯಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ…

ಬೆಂಗಳೂರು,ಜು,25,2019(www.justkannada.in):  ವಾಲ್ಮೀಕಿ ಸಮುದಾಯದಿಂದ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆ, ನಾನು ಸಮುದಾಯದ ಪರವಾಗಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಸ್ವಾಮೀಜಿಗಳು ಹೇಳಿದರೇ ವೇದಿಕೆಯಲ್ಲೇ ರಾಜೀನಾಮೆ ನೀಡಲು ಸಿದ್ದ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ.

ವಾಲ್ಮೀಕಿ ಸಮುದಾಯದಿಂದ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿಗೆ ಒತ್ತಾಯಿಸಿ ಇಂದು ಬೆಂಗಳೂರಿನಲ್ಲಿ ವಾಲ್ಮಿಕಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.  ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಶಾಸಕ ಶ್ರೀರಾಮುಲು ಸರ್ಕಾರ ಮೀಸಲಾತಿ ನೀಡುವವರೆಗೂ ನಾನು ಬಿಡಲ್ಲ. ಸ್ವಾಮೀಜಿ ಒಪ್ಪಿದರೆ ಈಗಲೇ ಈ ವೇದಿಕೆಯಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ  ಎಂದಿದ್ದಾರೆ.

ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕೊಟ್ಟ ಭಿಕ್ಷೆಯಿಂದ ಇಂದು ನಾವು ರಾಜಕಾರಣದಲ್ಲಿದ್ದೇವೆ.  ನಾವು ಶಾಸಕರಾಗಲು ಸ್ವಾಮೀಜಿಗಳು ಕಾರಣರಾಗಿದ್ದಾರೆ. ಸ್ವಾಮೀಜಿಗಳ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಸಮಾಜಕ್ಕಾಗಿ ಕೆಲಸ ಮಾಡಬೇಕು. ಹೀಗಾಗಿ ನನ್ನ ಸಮುದಾಯಕ್ಕೆ ಅನ್ಯಾಯವಾಗಲು ಬಿಡಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.

Key words: ready- resign –now-MLA Sriramulu- statement – protest