Sunday, September 13, 2026

BDA Apartments

ಸೆಲ್ಫಿ ತೆಗೆಯಲುಹೋಗಿ ಮೂಕನಮನೆ ಫಾಲ್ಸ್ ನಲ್ಲಿ ಬಿದ್ದು ಸಾವನ್ನಪ್ಪಿದ ಯುವಕ B...
Home Crime ಸೆಲ್ಫಿ ತೆಗೆಯಲುಹೋಗಿ ಮೂಕನಮನೆ ಫಾಲ್ಸ್ ನಲ್ಲಿ ಬಿದ್ದು ಸಾವನ್ನಪ್ಪಿದ ಯುವಕ

ಸೆಲ್ಫಿ ತೆಗೆಯಲುಹೋಗಿ ಮೂಕನಮನೆ ಫಾಲ್ಸ್ ನಲ್ಲಿ ಬಿದ್ದು ಸಾವನ್ನಪ್ಪಿದ ಯುವಕ

ಹಾಸನ: ಜೂ-23:(www.justkannada.in) ಅದೆಷ್ಟೇ ದುರ್ಘಟನೆಗಳು ನಡೆಯುತ್ತಿದ್ದರೂ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆಯುವ ಹುಚ್ಚು ಮಾತ್ರ ಯುವಜನತೆಯಲ್ಲಿ ಕಡಿಮೆಯಾಗುತ್ತಿಲ್ಲ. ಇದೇ ಸೆಲ್ಫಿ ಕ್ರೇಜಿಗೆ ಈಗ ಮತ್ತೊರ್ವ ಯುವಕ ಬಲಿಯಾಗಿದ್ದಾನೆ.

ಸ್ನೇಹಿತರ ಜತೆ ಸಕಲೇಶಪುರಕ್ಕೆ ಪ್ರವಾಸ ತೆರಳಿದ್ದ ಯುವಕನೊಬ್ಬ ಸೆಲ್ಫಿ ತೆಗೆಯುತ್ತಾ ಮೂಕನ ಮನೆ ಫಾಲ್ಸ್​​ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ತನುಷ್​​​ (25) ಮೃತ ಯುವಕ.

ಬೆಂಗಳೂರಿನ ತಿಗಳರ ಪಾಳ್ಯದ ತನುಷ್​​​​​ ಹಾಗೂ ಪುರುಷೋತ್ತಮ್​​​​​ ವೀಕೆಂಡ್ ಹಿನ್ನಲೆಯಲ್ಲಿ ಬೈಕ್​​ನಲ್ಲಿ ಪ್ರವಾಸ ತೆರಳಿದ್ದರು. ಮಡಿಕೇರಿಯಲ್ಲಿ ಪ್ರವಾಸ ಮುಗಿಸಿ ಮೂಕನ ಮನೆ ಫಾಲ್ಸ್​​​​​ ನೋಡಲು ಬಂದಿದ್ದರು. ಈ ವೇಳೆ ಈಜಲು ಫಾಲ್ಸ್​ಗೆ ಇಳಿದಿದ್ದಾರೆ. ಮೃತ ತನುಷ್​​​​​​​​ ಬಂಡೆಯಿಂದ ಹರಿಯುತ್ತಿದ್ದ ನೀರನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಯಾ ತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಯಳಸೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ಫಿ ತೆಗೆಯಲುಹೋಗಿ ಮೂಕನಮನೆ ಫಾಲ್ಸ್ ನಲ್ಲಿ ಬಿದ್ದು ಸಾವನ್ನಪ್ಪಿದ ಯುವಕ
Hasana, man dead,selfi,Mukana mane falls