ಬಂಡೀಪುರ ‘ ಸಫಾರಿ ಮಾರ್ಗ ‘ ವಿಸ್ತರಣೆಗೆ ಮುಂದಾದ ಇಲಾಖೆ…?

 

ಮೈಸೂರು, ಜೂ.23, 2019 : (www.justkannada.in news) ಪ್ರವಾಸಿಗರು ಹಾಗೂ ಪ್ರಾಣಿಗಳ ಹಿತದೃಷ್ಟಿಯಿಂದ ಬಂಡೀಪುರದ ಸಫಾರಿ ಮಾರ್ಗ ವಿಸ್ತರಣೆಗೆ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಸಫಾರಿ ಮಾರ್ಗ ವಿಸ್ತರಣೆಗೆ ಮುಂದಾಗಿರುವ ಅರಣ್ಯ ಇಲಾಖೆ, ಹಾಲಿ ಇರುವ 10 ಮೀಟರ್ ಅಗಲದ ಸಫಾರಿ ಮಾರ್ಗವನ್ನು 20 ಮೀಟರ್ ಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.

ಸಫಾರಿ ಮಾರ್ಗದಲ್ಲಿರುವ ಮರಗಳನ್ನು ಹನನ ಮಾಡದೆ ಅವುಗಳನ್ನು ಹಾಗೆಯೇ ಉಳಿಸಿಕೊಂಡು ಪೊದೆ ಹಾಗೂ ಕುರುಚಲು ಗಿಡಗಳನ್ನು ಮಾತ್ರ ತೆರವುಗೊಳಿಸಿ ಮಾರ್ಗ ವಿಸ್ತರಣೆಗೆ ಉದ್ದೇಶಿಸಲಾಗಿದೆ.
ಸಫಾರಿ ಮಾರ್ಗದಲ್ಲಿನ ಪೊದೆಗಳ ನಡುವಿಂದ ಪ್ರಾಣಿಗಳು ಏಕಾ ಏಕಿ ಸಫಾರಿ ವಾಹನಕ್ಕೆ ಎದುರಾಗಿ ದಾಳಿಗೆ ಮುಂದಾಗುತ್ತಿದ್ದ ಕಾರಣ ಮಾರ್ಗ ವಿಸ್ತರಣೆಗೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಆ ಮೂಲಕ ಪ್ರವಾಸಿಗರನ್ನು ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸುವುದು ಇಲಾಖೆ ಉದ್ದೇಶ.

key words : forest officials are planning to expand safari road in bandipur due to wild animals attack on tourist vehicles