Friday, August 14, 2026

BDA Apartments

Home Cinema ಮುಂದಿನ ವರ್ಷ ಆರಂಭದಲ್ಲೇ ಸಿಗಲಿದೆ ದಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್ !

ಮುಂದಿನ ವರ್ಷ ಆರಂಭದಲ್ಲೇ ಸಿಗಲಿದೆ ದಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್ !

ಬೆಂಗಳೂರು, ಡಿಸೆಂಬರ್ 17, 2020 (www.justkannada.in): ದರ್ಶನ್ ಅಭಿನಯದ ಮುಂದಿನ ವರ್ಷ ಏಪ್ರಿಲ್ 2ರಂದು ‘ರಾಬರ್ಟ್’ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಮೊದಲು ಡಿಸೆಂಬರ್ ಅಂತ್ಯಕ್ಕೆ ಇಲ್ಲವೇ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇತ್ತು. ಆದರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್ ಹೊರತು ಪಡಿಸಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಶುರುವಾಗಿಲ್ಲ. ಹೀಗಾಗಿ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಗೆ ರಾಬರ್ಟ್ ಟೀಂ ತಯಾರಿ ನಡೆಸಿದೆ.

ಕೊರೊನಾ ಆತಂಕದ ನಡುವೆ ಚಿತ್ರಮಂದಿರ, ವ್ಯಾಪಾರ-ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇತ್ತೀಚಿಗೆ ಪ್ರೇಕ್ಷಕರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಸಿನಿಮಾ ರಿಲೀಸ್ ಪ್ಲಾನ್ ಮಾಡಲಾಗಿದೆ.