Monday, October 12, 2026

Dasara Wishes

Happy Dasara
Home Cinema ‘ರಾಬರ್ಟ್’ ಅಪ್ ಡೇಟ್’ಗೆ ಕಾದಿರುವ ದಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್

‘ರಾಬರ್ಟ್’ ಅಪ್ ಡೇಟ್’ಗೆ ಕಾದಿರುವ ದಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್

ಬೆಂಗಳೂರು, ಡಿಸೆಂಬರ್ 01, 2020 (www.justkannada.in): ರಾಬರ್ಟ್ ಸಿನಿಮಾದ ಅಪ್ ಡೇಟ್ ಗಾಗಿ ಕಾದಿರುವ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡ ಖುಷಿ ಸುದ್ದಿಯೊಂದನ್ನು ಪ್ರಕಟಿಸಿದೆ. ಚಿತ್ರದ ಮತ್ತೊಂದು ಪೋಸ್ಟರ್ ಡಿ. 3ಕ್ಕೆ ಲಾಂಚ್ ಆಗಲಿದೆ.

ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ಒಂದು ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ.

ಈ ಬಾರಿಯ ಅಫೀಷಿಯಲ್ ಪೋಸ್ಟರ್ ನಲ್ಲಿ ದರ್ಶನ್ ಇರಲ್ಲ. ಬದಲಾಗಿ ವಿನೋದ್ ಪ್ರಭಾಕರ್ ಅವರದ್ದಾಗಿರುತ್ತದೆ. ವಿನೋದ್ ಡಿಸೆಂಬರ್ 3ಕ್ಕೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ಪ್ರಯುಕ್ತ ಬರ್ತ್ ಡೇ ಬಾಯ್ ಗೆ ಚಿತ್ರತಂಡ ಉಡುಗೊರೆ ನೀಡುತ್ತಿದೆ.