Monday, October 5, 2026

BDA Apartments

ಪುರಸಭೆ ಕಾರ್ಯಾಲಯ ಕೆ.ಆರ್ ನಗರ BDA JK_Adv BDA Adv
Home Cinema ವೆಬ್ ಸಿರೀಸ್’ನತ್ತ ಕರಾವಳಿಯ ರಕ್ಷಿತ್ ಶೆಟ್ಟಿ ಚಿತ್ತ !

ವೆಬ್ ಸಿರೀಸ್’ನತ್ತ ಕರಾವಳಿಯ ರಕ್ಷಿತ್ ಶೆಟ್ಟಿ ಚಿತ್ತ !

ಬೆಂಗಳೂರು, ನವೆಂಬರ್ 21, 2020 (www.justkannada.in): ನಟ ರಕ್ಷಿತ್‌ ಶೆಟ್ಟಿ ವೆಬ್‌ ಸಿರೀಸ್‌ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿಅವರು ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಸಿನಿಮಾವೊಂದನ್ನು ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ವೆಬ್‌ ಸಿರೀಸ್‌ ಮಾಡಲು ಅವರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ಆರ್‌ಜೆ ಪ್ರದೀಪ ಸಾರಥ್ಯದಲ್ಲಿ ಒಂದು ವೆಬ್‌ ಸಿರೀಸ್‌ ಬಂದಿತ್ತು. ಈಗ ರಕ್ಷಿತ್‌ ಸಹ ಅಂತಹದ್ದೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿಒಂದು ಸಬ್ಜೆಕ್ಟ್ ಬರೆದಿಟ್ಟಿದ್ದೇನೆ. ಅದಕ್ಕೆ ‘ಏಕಂ’ ಎಂದು ಹೆಸರಿಡಲಾಗಿದೆ. ಒಟ್ಟು ಎಂಟು ಎಪಿಸೋಡ್‌ನ ವೆಬ್‌ ಸಿರೀಸ್‌ ಇದಾಗಿದೆ. ಮೊದಲ ಸೀಸನ್‌ನಲ್ಲಿ ಕರಾವಳಿಯ ಬಗೆಗಿನ ಕಥೆ ಇರುತ್ತದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.