ಟ್ರೆಂಡ್ ಸೃಷ್ಟಿಸಿದ ‘ಕ್ರೇಜಿಸ್ಟಾರ್’ ರವಿಚಂದ್ರನ್ ಪುತ್ರ ವಿಕ್ರಂ ಚಿತ್ರದ ಹಾಡು !

ಬೆಂಗಳೂರು, ನವೆಂಬರ್ 21, 2020 (www.justkannada.in): ‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್‌ ಅವರ ಚಿತ್ರದ ಹಾಡೊಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ!

ವಿಕ್ರಂ ಮೊದಲ ಚಿತ್ರ ‘ತ್ರಿವಿಕ್ರಮ’ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದೆ. ಸಹನಮೂರ್ತಿ ‘ತ್ರಿವಿಕ್ರಮ’ನಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾದ ‘ಮಮ್ಮಿ ಪ್ಲೀಸ್‌ ಮಮ್ಮಿ’ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿರುವ ಈ ಸಿನಿಮಾದಲ್ಲಿ ವಿಕ್ರಮ್‌ಗೆ ಜೋಡಿಯಾಗಿ ಆಕಾಂಕ್ಷಾ ಶರ್ಮ ನಟಿಸಿದ್ದಾರೆ.

ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆಗೆ ಒಳಗಾಗಿದೆ. ಸಿನಿಮಾಗಳಲ್ಲಿ ಅಮ್ಮ-ಮಗನ ಸೆಂಟಿಮೆಂಟ್‌ ಹಾಡುಗಳು ಬಹಳಷ್ಟಿರುತ್ತವೆ.