ಶೀಘ್ರವೇ ಕೆಜಿಎಫ್-2 ಫ್ಯಾನ್ಸ್’ಗೆ ಗುಡ್ ನ್ಯೂಸ್ ಸಿಗಲಿದೆ

ಬೆಂಗಳೂರು, ನವೆಂಬರ್ 21, 2020 (www.justkannada.in): ಕೆಜಿಎಫ್ 2 ಚಿತ್ರದ ಅಪ್ ಡೇಟ್ ನ್ಯೂಸ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ.

ಯೆಸ್. ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಟೀಸರ್ ಯಾವಾಗ, ರಿಲೀಸ್ ಡೇಟ್ ಯಾವಾಗ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಗುವ ಸಮಯ ಸಮೀಪಿಸಿದೆ.

ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಭಿಮಾನಿಗಳು ಟ್ವಿಟರ್ ನಲ್ಲಿ ಕೆಜಿಎಫ್ 2 ಬಗ್ಗೆ ಅಪ್ ಡೇಟ್ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರಶಾಂತ್ ನೀಲ್ ಮುಂದಿನ ತಿಂಗಳು ಎಂದಿದ್ದಾರೆ. ಈಗಾಗಲೇ ಜನವರಿಯಲ್ಲಿ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಓಡಾಡುತ್ತಿದೆ. ಡಿಸೆಂಬರ್ ನಲ್ಲಿ ಚಿತ್ರದ ರಿಲೀಸ್ ಡೇಟ್ ಪ್ರಕಟಿಸುವ ಸಾಧ‍್ಯತೆಯಿದೆ.