Wednesday, August 26, 2026

BDA Apartments

Home Front Page ಸಿದ್ದರಾಮಯ್ಯನವರು ಯಾವ ನಾಯಿ ಎಂದು ಮೊದಲು ತಿಳಿಸಲಿ : ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

ಸಿದ್ದರಾಮಯ್ಯನವರು ಯಾವ ನಾಯಿ ಎಂದು ಮೊದಲು ತಿಳಿಸಲಿ : ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

ಮೈಸೂರು,ನವೆಂಬರ್,01,2020(www.justkannada.in) : ಸಿದ್ದರಾಮಯ್ಯನವರು ಯಾವ ನಾಯಿ ಎಂದು ಮೊದಲು ತಿಳಿಸಲಿ. ಜೆಡಿಎಸ್ ಪಕ್ಷದಿಂದ ಬಂದಾಗ ಯಾವ ನಾಯಿಯಾಗಿದ್ದರು. ಕಾಂಗ್ರೆಸ್ ಪಕ್ಷ ಸೋಲಿನ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.jk-logo-justkannada-logo

ಸಿಎಂ ಸ್ಥಾನದಿಂದ ಬಿ.ಎಸ್.ವೈ ಕೆಳಗಿಳಿದರೆ ಬಿಜೆಪಿ ಸೇರಿದ ಶಾಸಕರದ್ದು ನಾಯಿಪಾಡು’ ಎಂಬ ಸಿದ್ದು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ್ದಾರೆ.

ಅನಾರ್ಹಗೊಂಡ ಶಾಸಕರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಗುರವಾಗಿ ಮಾತನಾಡಬಾರದು. ಜೆಡಿಎಸ್ ಪಕ್ಷದಿಂದ ಬಂದಾಗ ಯಾವ ನಾಯಿಯಾಗಿದ್ದರು ತಿಳಿಸಲಿ. ಕಾಂಗ್ರೆಸ್ ಪಕ್ಷ ಸೋಲಿನ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.

ಐದು ವರ್ಷ ಆಡಳಿತ ನಡೆಸಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ 35 ಸಾವಿರ ಅಂತರದಿಂದ ಸೋತು ಬದಾಮಿಗೆ ಓಡಿ ಹೋಗಿದ್ದ ಸಿದ್ದು ಯಾವ  ನಾಯಿ ಎಂದು ತಿಳಿಸಲಿ. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಡುವುದನ್ನ ಸಿದ್ದರಾಮಯ್ಯ ನಿಲ್ಲಿಸಲಿ ಎಂದು ಟೀಕಿಸಿದ್ದಾರೆ.

Siddaramaiah-dog-Let-me-first-inform-you-H.Vishwanath-Member-Parliament

key words : Siddaramaiah-dog-Let-me-first-inform-you-H.Vishwanath-Member-Parliament