ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತ

ಮೈಸೂರು,ಅಕ್ಟೋಬರ್,2020(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ. ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಕಲಾತಂಡಗಳಿಗೆ ಬ್ರೇಕ್ ಹಾಕಲಾಗಿದೆ.jk-logo-justkannada-logo

ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಅವರಣದಲ್ಲಿ ಕಾರ್ಯಕ್ರಮ ಪೂರ್ಣ ಕುಂಭದ ಮೂಲಕ ಸಚಿವರಿಗೆ ಸ್ವಾಗತ ಕೋರಲಾಯಿತು.

ಅರಮನೆ ಅವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು. ಬಳಿಕ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕೋಟೆ ಆಂಜನೇಯ ಮುಂಭಾಗ ರಾಷ್ಟ್ರ ಹಾಗೂ ರಾಜ್ಯಧ್ವಜ ಧ್ವಜಾರೋಹಣ ನೆರವೇರಿಸಿದರು.Kannada-Rajyotsavam-celebration-cultural-city-Limited-traditional-worship

ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಕಲಾತಂಡಗಳಿಗೆ ಬ್ರೇಕ್, ಪೊಲೀಸ್ ಹಾಗೂ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನವೂ ಇಲ್ಲ. ಅಶ್ವಾರೋಹಿ ದಳದಿಂದ ಗೌರವ ಸಮರ್ಪಿಸಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.

 

Kannada-Rajyotsavam-celebration-cultural-city-Limited-traditional-worship

ಸಚಿವರಿಗೆ ಸಾಥ್ ನೀಡಿದ ಶಾಸಕ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇತರರು ಇದ್ದರು.

ಮೈಸೂರು ಜಿಲ್ಲೆಯ 11 ಸಾಧಕರಿಗೆ ರಾಜೋತ್ಸವ ಸನ್ಮಾನKannada-Rajyotsavam-celebration-cultural-city-Limited-traditional-worship

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 11ಮಂದಿ ಸಾಧಕರಿಗೆ ಜಿಲ್ಲಾಡಳಿತದಿಂದ ಗೌರವ.  ಮಾದ್ಯಮ ಕ್ಷೇತ್ರದಿಂ ಪಬ್ಲಿಕ್ ಟಿವಿ ವರದಿಗಾರ ಕೆ ಪಿ ನಾಗರಾಜ್, ಸಾಹಿತ್ಯ ಕ್ಷೇತ್ರದಿಂದ ಡಾ. ಗುಬ್ಬಿಗೂಡು ರಮೇಶ್, ಸಾಮಾಜ ಸೇವೆ ಕ್ಷೇತ್ರದಿಂದ ಶಂಕರ್ ನಾರಾಯಣ್ ಶಾಸ್ತ್ರಿ, ಜಾನಪದ ಕ್ಷೇತ್ರದಿಂದ ಭಾಗ್ಯಮ್ಮ, ಕಲೆ ಮತ್ತು ಸಂಗೀತ ಕ್ಷೇತ್ರದಿಂದ ರೇವಣ್ಣ.ಪರಿಸರ ಕ್ಷೇತ್ರದಿಂದ ನಾಗಭೂಷಣ್ ರಾವ್, ಕನ್ನಡ ಪರ ಹೋರಾಟಗಾರರಾದ ಸಿದ್ದರಾಜು,ಡಿ ಆರ್ ಕರಿಗೌಡ, ಡಿ ಎಂ ಬಸವಣ್ಣ, ಎಂಬಿ ಮಂಚೇಗೌಡ ಸೇರಿ 11 ಜನರಿಗೆ ಸನ್ಮಾನ ಮಾಡಲಾಯಿತು. Kannada-Rajyotsavam-celebration-cultural-city-Limited-traditional-worship

key words : Kannada-Rajyotsavam-celebration-cultural-city-
Limited-traditional-worship