Tuesday, September 22, 2026

BDA Apartments

ಚಿತ್ರ ಸಾಹಿತಿ ಕೆ.ಕಲ್ಯಾಣ್ ಕೌಟುಂಬಿಕ ಕಲಹ, ಆರೋಪಿ ಮಹಿಳೆ ಆತ್ಮಹತ್ಯೆ..! BDA JK_Adv BDA...
Home Cinema ಚಿತ್ರ ಸಾಹಿತಿ ಕೆ.ಕಲ್ಯಾಣ್ ಕೌಟುಂಬಿಕ ಕಲಹ, ಆರೋಪಿ ಮಹಿಳೆ ಆತ್ಮಹತ್ಯೆ..!

ಚಿತ್ರ ಸಾಹಿತಿ ಕೆ.ಕಲ್ಯಾಣ್ ಕೌಟುಂಬಿಕ ಕಲಹ, ಆರೋಪಿ ಮಹಿಳೆ ಆತ್ಮಹತ್ಯೆ..!

 

ಕೊಪ್ಪಳ, ಅ. 29, 2020 : ಕನ್ನಡ ಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರ ಕೌಟುಂಬಿಕ ಕಲಹಕ್ಕೆ ಕಾರಣವಾಗಿದ್ದ ಆರೋಪಿ ಮಹಿಳೆ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ವಿಷ ಸೇವಿಸಿ ಅತ್ಮಹತ್ಯೆಗೆ ಶರಣು. ಕೊಪ್ಪಳ ಜಿಲ್ಲೆಯ, ಕುಷ್ಟಗಿ ಕೋರ್ಟ್ ಆವರಣದಲ್ಲಿ ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತ.

ಆತ್ಮಹತ್ಯೆ ಮಾಡಿಕೊಂಡ ಜ್ಯೋತಿ ಕುಲಕರ್ಣಿ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ವಿಷ ಸೇವಿಸಿ ತನ್ನ ವಕೀಲರನ್ನು ಭೇಟಿ ಮಾಡಲು ಹೋಗಿದ್ದಾಗ, ಕೋರ್ಟ್‌ ಆವರಣದಲ್ಲಿ ಕುಸಿದು ಬಿದ್ದಳು. ಕೂಡಲೇ ವಕೀಲರ ಮತ್ತು ಪೊಲೀಸರ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಳು.

ಬಾಗಲಕೋಟೆ ಜಿಲ್ಲೆ ಮೂಲದ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ, ಕಳೆದ 2017ರಿಂದ ಕುಷ್ಟಗಿ ನಂಟಿದೆ. ಸರ್ಕಾರಿ ಕಲಸ ಕೊಡಿಸುವುದಾಗಿ ನಂಬಿಸಿ ಸುಮಾರು 20 ಯುವಕರಿಂದ ತಲಾ 3 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪ ಎದುರಿಸುತ್ತಿದ್ದಳು. ಈ ಬಗ್ಗೆ ಪ್ರಕರಣ ಸಹ ದಾಖಲಾಗಿತ್ತು.

k.kalyan-kannada-music-director-family-dispute-lady-suicide

 

key words : k.kalyan-kannada-music-director-family-dispute-lady-suicide