Wednesday, September 9, 2026

BDA Apartments

Home Cinema ಕನ್ನಡ ಧಾರಾವಾಹಿ ಹಿರಿಯ ನಟ ಕೃಷ್ಣ ನಾಡಿಗ್ ನಿಧನ

ಕನ್ನಡ ಧಾರಾವಾಹಿ ಹಿರಿಯ ನಟ ಕೃಷ್ಣ ನಾಡಿಗ್ ನಿಧನ

ಬೆಂಗಳೂರು,ಅಕ್ಟೋಬರ್,18,2020(www.justkannada.in) : ಪ್ರಖ್ಯಾತ ಕನ್ನಡ ಧಾರಾವಾಹಿ ಹಿರಿಯ ನಟ ಕೃಷ್ಣ ನಾಡಿಗ್ ನಿಧನರಾಗಿದ್ದಾರೆ.jk-logo-justkannada-logoಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರು ಶನಿವಾರ ರಾತ್ರಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣ ನಾಡಿಗ್ ಅವರು ‘ಮಿಲನ’, ‘ದೇವಿ’, ‘ಪಾರು’ ಮುಂತಾದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಇವರಿಗೆ ಕೆಂಪೇಗೌಡ ಪ್ರಶಸ್ತಿ ಕೂಡ ಸಂದಿತ್ತು. 50 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ನಟ, ಬರಹಗಾರರಾಗಿ ಗುರುತಿಸಿಕೊಂಡಿದ್ದರು.

Veteran-actor-Krishna-Nadig-passes-away

ಸಾಮಾಜಿಕ ಜಾಲತಾಣದಲ್ಲಿ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಿಮ್ಮ ವಿದಾಯ ಸೃಷ್ಟಸಿದ ಶೂನ್ಯ ಅಗಾಧವಾದದ್ದು. ನಿಮ್ಮ ಮಮತೆ ತುಂಬಿದ ಹೃದಯ, ಜ್ಞಾನ ತುಂಬಿದ ಮಾತುಗಳು,ಮರೆಯಲಾಗದ ನಟನೆ. ಅಂಥಾ ಹೃದಯವೇ ನಿಮ್ಮನ್ನು ಬಿಟ್ಟಿತೇ ಎಂದು ಟಿ.ಎನ್.ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.

key words : Veteran-actor-Krishna-Nadig-passes-away