Thursday, September 24, 2026

BDA Apartments

ಡಿ.12ರಿಂದ ಮೂರು ದಿನಗಳ ಕಾಲ ‘ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ BDA JK_Adv BDA Adv
Home Front Page ನಾನೊಬ್ಬ ರೈತನ ಮಗ: ಈಗಲೂ ಬೇಸಾಯ ಮಾಡ್ತೀನಿ- ಡಿ.ಕೆ ಶಿವಕುಮಾರ್…

ನಾನೊಬ್ಬ ರೈತನ ಮಗ: ಈಗಲೂ ಬೇಸಾಯ ಮಾಡ್ತೀನಿ- ಡಿ.ಕೆ ಶಿವಕುಮಾರ್…

ಮಂಡ್ಯ,ಅಕ್ಟೋಬರ್,10,2020(www.justkannada.in):   ನಾನೊಬ್ಬ ರೈತನ ಮಗ. ಈಗಲೂ ನಾನು ಬೇಸಾಯ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.jk-logo-justkannada-logo

ಮಂಡ್ಯದಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನಾನೊಬ್ಬ ರೈತನ ಮಗ. ಈಗಲೂ ನಾನು ಬೇಸಾಯ ಮಾಡುತ್ತೇನೆ. ನಮ್ಮ ಕುಟುಂಬಕ್ಕೆ ನೂರಾರು  ಎಕರೆ ಜಮೀನಿದೆ. ಕೊರೋನಾ ಸಮಯದಲ್ಲಿ ರೈತರ ಬದುಕು ದುಸ್ತರವಾಗಿತ್ತು. ಗಾಣದಲ್ಲಿ ಹಾಕಿ ಅರೆಯಲಾಯ್ತು. ನಾವೆಲ್ಲಾ ಸೇರಿ ರೈತರ ಪರ ಹೋರಾಡುತ್ತೇವೆ ಎಂದರು.mandya-i-am-farmers-son-kpcc-president-dk-sivakumar

ಕೇಂದ್ರ ಸರ್ಕಾರ ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: mandya- I am – farmer’s- son-kpcc-president-DK Sivakumar.