ಡ್ರಗ್ಸ್ ಮಾಫಿಯಾ : ಜನ್ಮದಿನದಂದು ಜೈಲಿನಲ್ಲಿ ಕಣ್ಣೀರು ಹಾಕಿದ ನಟಿ ಸಂಜನಾ ಗಲ್ರಾನಿ

ಬೆಂಗಳೂರು,ಅಕ್ಟೋಬರ್,10,2020(www.justkannada.in) : ಡ್ರಗ್ಸ್ ಮಾಫಿಯಾ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಜನ್ಮದಿನವಾದ ಇಂದು ಪೋಷಕರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವೆಂದು ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ.jk-logo-justkannada-logo

ಕೊರೊನಾ ಕಾರಣದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ, ನಟಿ ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನದಲ್ಲಿರುವ ತಮ್ಮ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ.

ಇಂದು ನಟಿ ಸಂಜನಾ 31ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಪ್ರತಿ ಬಾರಿ ಐಷಾರಾಮಿ ಹೋಟೆಲ್ ಗಳಲ್ಲಿ ಬರ್ತ್ ಡೇ ಆಚರಿಸುತ್ತಿದ್ದರು. ಆದರೆ, ಈ ಬಾರಿ ಜೈಲಿನಲ್ಲಿದ್ದಾರೆ. ಹೀಗಾಗಿ, ನಿನ್ನೆ ರಾತ್ರಿಯಿಂದ ಸುಮಾರು ನಾಲ್ಕು ಬಾರಿ ಜೋರಾಗಿ ಕಿರುಚುತ್ತಾ, ಅಳುತ್ತಾ ಗೋಳಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

 Drugs Mafia-Actress Sanjana Galrani-Tears-Jail- Birthday

ವಿಚಾರಣಾಧೀನ ಖೈದಿಯಾಗಿರುವ ಸಂಜನಾಗೆ ಕುಟುಂಬಸ್ಥರೊಂಧಿಗೆ ಮಾತನಾಡಲು ಒಂದು ವಾರಗಳ ಅವಕಾಶ ನೀಡಲಾಗಿದೆ. ವಾರದಲ್ಲಿ 2 ಬಾರಿ ಮಾತ್ರ ಮನೆಗೆ ಕರೆ ಮಾಡಲು ಸಿಬ್ಬಂದಿ ಅವಕಾಶ ನೀಡಿದ್ದಾರೆ. ಇನ್ನು ಹುಟ್ಟುಹಬ್ಬದ ದಿನವೂ ಪೋಷಕರ ಭೇಟಿಗೆ ಅವಕಾಶ ಇಲ್ಲವಾಗಿದೆ. ಹೀಗಾಗಿ, ತಮ್ಮ ತಾಯಿ ರೇಷ್ಮಾ ಗಲ್ರಾನಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

key words : Drugs Mafia-Actress Sanjana Galrani-Tears-Jail- Birthday