ರಾಜ್ಯ ಮತ್ತು ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬಂದು ರೈತ ವಿರೋಧಿ ಮಸೂದೆ ರದ್ದುಪಡಿಸುತ್ತೇವೆ- ಮಾಜಿ ಸಿಎಂ ಸಿದ್ಧರಾಮಯ್ಯ…

ಮಂಡ್ಯ,ಅಕ್ಟೋಬರ್,10,2020(www.justkannada.in):  ರಾಜ್ಯ ಮತ್ತು ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಈಗಿನ ಬಿಜೆಪಿ ಸರ್ಕಾರ ಜಾರಿಗೆ ತರುವ ರೈತ ವಿರೋಧಿ ಮಸೂದೆಗಳನ್ನು ರದ್ದುಪಡಿಸುತ್ತೇವೆ ಎಂದು ಮಾಜಿ ಸಿಎಂ  ಸಿದ್ಧರಾಮಯ್ಯ ತಿಳಿಸಿದ್ದಾರೆ.jk-logo-justkannada-logo

ಮಂಡ್ಯದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರೈತ ವಿರೋಧಿ ಕೃಷಿಮಸೂದೆಗಳ ಬಗ್ಗೆ ವಿಧಾನಸಭೆಯಲ್ಲಿ ನಾನು ಗಂಟೆಗಟ್ಟಲೇ ಮಾತನಾಡಿದೆ. ಆದರೆ ಅದು ಹೊಳೆಯಲ್ಲಿ ಹುಣಸೆಹಣ್ಣು ತೇಯ್ದೆ ಹಂಗೆ ಆಯ್ತು. ರೈತರು ಹೋರಾಟ ಮಾಡದಿದ್ರೆ ಅದು ಕಾನೂನಾಗಿ ಬಂದು ಬಿಡುತ್ತದೆ. ನಾವು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆ ವೇಳೆ ರೈತವಿರೋಧಿ ಮಸೂದೆಗಳನ್ನ ರದ್ಧುಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಸಿಎಂ ಬಿಎಸ್ ವೈ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡರೇ ಅವರ ಮಗ ಆರ್ ಟಿಜಿಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಾನೆ. ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಹೋಗಿದೆ ಎಂದು ಕಿಡಿ ಕಾರಿದರು.we-come-power-repeal-anti-farmer-bill-former-cm-siddaramaiah

ನಾನು ಅವಿಶ್ವಾಸ ಮಂಡನೆಗೆ ಜೆಡಿಎಸ್ ಬಳಿ ಸಹಾಯ ಕೇಳಿದೆ. ಆದರೆ ಅವರು ಸಭೆ ಮಾಡುತ್ತೇವೆ ಎಂದರು. ಸಭೆ ಬಳಿಕ ಅವರು ಬೆಂಬಲ ನೀಡಲ್ಲ ಎಂದರು. ಇದು ಅವರು ರೈತರ ಪರ ಇಲ್ಲ ಎಂದಾಗುತ್ತದೆ. ರೈತರ ಮಕ್ಕಳು ಎಂದು ಹೇಳುತ್ತಾರೆ. ಹಾಗಾದರೇ ನಾವು ರೈತರ ಮಕ್ಕಳಲ್ಲವೇ…? ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: We – come – power -repeal – anti-farmer bill- Former CM- Siddaramaiah.