ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ: 50 ಲಕ್ಷ ಪರಿಹಾರ ಬಿಡುಗಡೆ ಮಾಡಿ- ಎಂಎಲ್ ಸಿ ರಘು ಆಚಾರ್ ಪತ್ರ…

0
263

ಬೆಂಗಳೂರು,ಅಕ್ಟೋಬರ್,10,2020(www.justkannada.in):  ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮೃತ ಶಿಕ್ಷಕರ ಕುಟುಂಬ ವರ್ಗದವರಿಗೆ 50 ಲಕ್ಷ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ .ಸುರೇಶ್ ಕುಮಾರ್ ಅವರಿಗೆ ವಿಧಾನಪರಿಷತ್ ಸದಸ್ಯ ರಘು ಆಚಾರ್ ಪತ್ರ ಬರೆದಿದ್ದಾರೆ.consider-teachers-covid-warriors-letter-mlc-raghu-achar

ಈ ಕುರಿತು ಪತ್ರ ಬರದಿರುವ ರಘು ಆಚಾರ್, ರಾಜ್ಯಾದ್ಯಂತ ಕೋವಿಡ್ ಉಲ್ಬಣಿಸಿರುವ ಈ ಸಂದರ್ಭದಲ್ಲಿ ವಿದ್ಯಾಗಮ ಸೇರಿದಂತೆ ಬೇರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ  ಶಿಕ್ಷಕರನ್ನೂ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದೆಲ್ಲೆಡೆ ಕೋವಿಡ್ ಗೆ ಬಲಿಯಾದ ಶಿಕ್ಷಕರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಮೃತ ಶಿಕ್ಷಕರು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಅವರ ಕುಟುಂಬಕ್ಕೆ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಬೇಕು ಎಂದು ರಘು ಆಚಾರ್ ಆಗ್ರಹಿಸಿದ್ದಾರೆ.consider-teachers-covid-warriors-letter-mlc-raghu-achar

ವಿದ್ಯಾಗಮ ಯೋಜನೆ ಸ್ಥಗಿತ ಸ್ವಾಗತಿಸಿರುವ ರಘು ಆಚಾರ್, ಸದ್ಯಕ್ಕೆ ವಿದ್ಯಾಗಮ ಯೋಜನೆ ಸ್ಥಗಿತಗೊಳಿಸಿರುವುದು ಮಕ್ಕಳ ಆರೋಗ್ಯ ದೃಷ್ಠಿಯಿಂದ ಸಮಂಜಸವಾಗಿದೆ. ಈ ಶೈಕ್ಷಣಿಕ ಸಾಲು ಒಂದರಿಂದ ಒಂಬತ್ತನೇ ತರಗತಿವರೆಗೆ ಮಕ್ಕಳಿಗೆ ಶಾಲೆ ತೆರೆಯದಿರುವುದೇ ಸೂಕ್ತ ಎಂದು ರಘು ಆಚಾರ್  ಪತ್ರದಲ್ಲಿ ಸಲಹೆ ನೀಡಿದ್ದಾರೆ.

Key words: Consider – teachers – Covid Warriors-Letter -MLC -Raghu Achar