Monday, September 28, 2026

BDA Apartments

Home Crime ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅಂದರ್: 23 ಕೆ.ಜಿ ಹಸಿ ಗಾಂಜಾ ಪೊಲೀಸರ ವಶಕ್ಕೆ….

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅಂದರ್: 23 ಕೆ.ಜಿ ಹಸಿ ಗಾಂಜಾ ಪೊಲೀಸರ ವಶಕ್ಕೆ….

ಬೆಂಗಳೂರು,ಸೆಪ್ಟಂಬರ್,27,2020(www.justkannada.in):  ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆರ್.ಟಿ ನಗರ ಠಾಣಾ ಪೊಲೀಸರು ಬಂಧಿಸಿ ಸುಮಾರು 23 ಕೆ.ಜಿ ಹಸಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಆಂದ್ರಪ್ರದೇಶ ಮೂಲದ ಬುಡೇನ್ ಸಾಬ್(59), ಕೋಲಾರ ಜಿಲ್ಲೆ ಶ್ರೀನಿವಾಸ ಪುರ ಮೂಲದ ಚಂದ್ರಪ್ಪ(40), ಚಿಕ್ಕಬಳ್ಳಾಪುರ ಜಿಲ್ಲೆ ಮೂಲದ  ಮಾರಪ್ಪ(56) ಬಂಧಿತ ಆರೋಪಿಗಳು. ಆರ್.ಟಿ ನಗರ ವ್ಯಾಪ್ತಿಯ ಸುಲ್ತಾನ್ ಪಾಳ್ಯ ಹನುಮಂತಪ್ಪ ಲೇಔಟ್ ನಲ್ಲಿ ಕಾರ್ತಿಕ್ ಎಂಬಾತ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ಕಾರ್ತಿಕ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬುಡೆನ್ ಸಾಬ್ ಗಾಂಜಾ ತಂದು ಕೊಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ನಡುವೆ ಆರೋಪಿ ಬುಡೆನ್ ಸಾಬ್ ಮಾದಕ ವಸ್ತು ಗಾಂಜಾ ಸೊಪ್ಪನ್ನು ಈರುಳ್ಳಿ ಮೈದಾನದಲ್ಲಿ ಮಾರಾಟ ಮಾಡುವುದಕ್ಕಾಗಿ ತಂದಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಆರ್.ಟಿ ನಗರ ಠಾಣಾ ಪೊಲೀಸರು ಪಿಎಸ್ ಐ ಮಾರುತಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.selling-marijuana-three-arrest-seized-police

ನಂತರ ಆರೋಪಿ ಬುಡೆನ್ ಸಾಬ್ ನನ್ನ ವಿಚಾರಣೆಗೊಳಪಡಿಸಿದಾಗ ತನ್ನ ಜತೆ ಇನ್ನಿಬ್ಬರು ಆರೋಪಿಗಳು ಚಂದ್ರಪ್ಪ ಮತ್ತು ಮಾರಪ್ಪ ಮಾದಕ ವಸ್ತು ಮಾರಾಟದಲ್ಲಿ ಶಾಮೀಲಾಗಿರುವುದು ತಿಳಿದು ಬಂದಿದೆ.  ಬಂಧಿತರಿಂದ 25 ಕೆ.ಜಿ ತೂಕದ ಹಸಿ ಗಾಂಜಾ ಮತ್ತು ನಗದು ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: selling- marijuana-three-arrest-seized – police