ಕರ್ನಾಟಕ ಬಂದ್: ಸಾರ್ವಜನಿಕ ಆಸ್ತಿಪಾಸ್ತಿಗೆ ಕಲ್ಲು ತೂರಿದ್ರೆ ಕಠಿಣ ಕ್ರಮ- ಸಚಿವ ಆರ್.ಅಶೋಕ್ ಎಚ್ಚರಿಕೆ…

ಬೆಂಗಳೂರು,ಸೆಪ್ಟಂಬರ್,27,2020(www.justkannada.in):  ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಕಲ್ಲು ತೂರಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.jk-logo-justkannada-logo

ನಾಳಿನ ಬಂದ್  ಬಗ್ಗೆ  ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಸರ್ಕಾರದ ವತಿಯಿಂದ ಬಂದ್ ಮಾಡಲು ಅವಕಾಶವಿಲ್ಲ.  ಹೀಗಾಗಿ ಸರ್ಕಾರಿ ಕಚೇರಿ, ಬಸ್ ಸಂಚಾರ ಇರಲಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು ಎಂದು ತಿಳಿಸಿದರು.karnataka-bundh-public-property-minister-r-ashok-warns

ಹಾಗೆಯೇ  ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.  ನಾಳಿನ ಬಂದ್ ವೇಳೆ ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟು ಉಂಟುಮಾಡಬಾರದು. ಒಂದು ವೇಳೆ  ಸಾರ್ವಜನಿಕ ಆಸ್ತಿಪಾಸ್ತಿಗೆ ಕಲ್ಲು ತೂರಿದ್ರೆ  ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

Key words: Karnataka Bundh-public property- Minister- R. Ashok -warns.