ಎಸ್ಟಿ ವರ್ಗಕ್ಕೆ ಕುರುಬ ಸಮುದಾಯ ಸೇರಿಸುವಂತೆ ಆಗ್ರಹ: ಮುಖಂಡರಿಗೆ ಪಾದಯಾತ್ರೆ ಕರೆ ಕೊಟ್ಟ ಸಚಿವ ಕೆ.ಎಸ್ ಈಶ್ವರಪ್ಪ…

ಬೆಂಗಳೂರು,ಸೆಪ್ಟಂಬರ್,27,2020(www.justkannada.in): ಸ್ಟಿ ವರ್ಗಕ್ಕೆ ಕುರುಬ ಸಮುದಾಯ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಾಯ ಹೇರಲು ನಿರ್ಧಾರ ಮಾಡಲಾಗಿದೆ. ನಮ್ಮ ಉದ್ದೇಶ ನಮ್ಮ ಸಮುದಾಯ ಎಸ್ಟಿಗೆ ಸೇರಿಸಬೇಕು ಅನ್ನೋದು. ಹೀಗಾಗಿ ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವರಾದ ಕೆ.ಎಸ್. ಈಶ್ವರಪ್ಪ ತಮ್ಮ ಸಮುದಾಯ ಮುಖಂಡರಿಗೆ ಕರೆ ನೀಡಿದರು.jk-logo-justkannada-logo

ಕುರುಬ ಸಮುದಾಯ ಎಸ್ ಟಿ ಹೋರಾಟ ಕುರಿತು ರೂಪರೇಷೆಗೆ  ಇಂದು ಸಚಿವ ಕೆ.ಎಸ್. ಈಶ್ವರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಕುರುಬ ಸಮಾಜದ ನಾಯಕರ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಮಾತನಾಡಿದ ಕಾಗಿನೆಲೆ ಗುರುಪೀಠದ ಮಹಾಸ್ವಾಮಿಗಳಾದ  ನಿರಂಜನಾನಂದಪುರಿ ಅವರು,  ಎಸ್.ಟಿ ಹೋರಾಟಕ್ಕೆ  ರಾಜ್ಯ ಮಟ್ಟದ ಸಮಿತಿ ರಚನೆ ಮಾಡಿ ಅದರ ನೇತೃತ್ವವನ್ನು  ಗುರುಪೀಠಕ್ಕೆ ನೀಡಿದರೆ ಅದರ ಮುಂದಾಳತ್ವ ವಹಿಸಿ ತಮ್ಮೆಲ್ಲರ ಸಹಕಾರದೊಂದಿಗೆ ಅದರ ಸಾಕಾರದತ್ತ ಕ್ರಿಯಾಶೀಲ ಹೋರಾಟ ಮಾಡಲಾಗುವುದು ಎಂದರು.

ನಾವು ಹೋರಾಟವನ್ನು ವ್ಯವಸ್ಥಿತವಾಗಿ ಮತ್ತು ನೇರ ದೃಷ್ಟಿಯಿಂದ ಮಾಡಬೇಕಾಗುತ್ತದೆ. ಈ ಹೋರಾಟಕ್ಕೆ ಸಮಾಜದ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿಗಳೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೂಡ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈಗಾಗಲೇ ಈ ವಿಷಯದ ಕುರಿತು ಚರ್ಚಿಸಲಾಗಿದೆ ಅವರು ಸಹಮತ ವ್ಯಕ್ತ ಪಡಿಸಿದ್ದಾರೆ.  ಇನ್ನು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಾರ್ಟಿ ಸರ್ಕಾರ ಇರುವುದರಿಂದ ಅದೂ ಕೂಡ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದ್ದರು. ಅವರು ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದರು.  ಅವರ ಒಗ್ಗಟ್ಟಿನ ಪ್ರದರ್ಶನದಿಂದ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ತೀರ್ಮಾನ ಮಾಡಲು ಮುಂದಾಗಿದೆ. ಹಾಗೆಯೇ ನಾವು ಅವರ ರೀತಿ ಹೋರಾಟ ರೂಪಿಸಬೇಕು. ರಾಜ್ಯದಲ್ಲಿ ಅವರಂತೆ ಪಾದಯಾತ್ರೆ ಮಾಡಬೇಕು. ಸಮುದಾಯದಿಂದ ಶಕ್ತಿ ಪ್ರದರ್ಶನ ಆಗಬೇಕು. ಇಲ್ಲವಾದಲ್ಲಿ ಯಾವುದೇ ಸರ್ಕಾರಗಳು ಬಗ್ಗೋದಿಲ್ಲ ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಉದ್ದೇಶ ನಮ್ಮ ಸಮುದಾಯ ಎಸ್ಟಿಗೆ ಸೇರಿಸಬೇಕು ಅನ್ನೋದು. ಹೀಗಾಗಿ ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಸಮುದಾಯದ ಮುಖಂಡರಿಗೆ ಪಾದಯಾತ್ರೆ ಕರೆ ಕೊಟ್ಟರು.kuruba-community-st-category-minister-ks-eshwarappa-meeting

ಇವತ್ತು ಸಮುದಾಯದ ಸ್ವಾಮೀಜಿಗಳು, ಎಲ್ಲ ಪಕ್ಷಗಳ ಪ್ರಮುಖರು, ಸಂಘಟನೆಗಳು ಸಭೆ ಇತ್ತು. ಎಸ್ಟಿ ವರ್ಗಕ್ಕೆ ಕುರುಬ ಸಮುದಾಯ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಾಯ ಹೇರಲು ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಹೋರಾಟದ ರೂಪುರೇಷೆಗಳು, ಕಾರ್ಯಕ್ರಮಗಳ ಬಗ್ಗೆ ನಿಗದಿ ಮಾಡುತ್ತೇವೆ. ಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ನಿಗದಿ ಮಾಡಲಾಗುವುದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್,  ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಮಾಜಿ ಸಚಿವ ಮತ್ತು ಶಾಸಕರಾದ ಬಂಡೆಪ್ಪ ಕಾಶ್ಯಂಪೂರ್ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ  ರಘುನಾಥ್ ರಾವ್ ಮಲಕಾಪೂರೆ, ಮಾಜಿ  ಮಹಾಪೌರರೂ ಮತ್ತು ಕುರುಬರ ಸಂಘದ ಪ್ರಧಾನ ಕಾರ್ಯದರ್ಶೀಗಳಾದ  ಡಿ.ವೆಂಕಟೇಶ ಮೂರ್ತಿ, ಮಾಜಿ ಮಹಾಪೌರರಾದ ರಾಮಚಂದ್ರಪ್ಪ,  ಶಿವಮೊಗ್ಗ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಈ.ಕಾಂತೇಶ.  ಅಹಿಂದ ನಾಯಕರಾದ ಕೆ.ಮುಕುಡಪ್ಪ, ಹಿರಿಯರಾದ  ಟಿ.ಬಿ.ಬಳಗಾವಿ, ಪುಟ್ಟಸ್ವಾಮಿ, ಮತ್ತು ಆನೇಕಲ್ ದೊಡ್ಡಯ್ಯ  ರಾಜ್ಯ ಕುರುಬರ ಸಂಘದ ಪದಾಧಿಕಾರಿಗಳು ಸಂಘ ಸಂಸ್ಥೆಯ ಮುಖಂಡರುಗಳು ಮುಂತಾದವರು ಭಾಗವಹಿಸಿದ್ದರು.

Key words: kuruba  community – ST –category-Minister- KS Eshwarappa -meeting