Thursday, August 13, 2026

BDA Apartments

Home Cinema ತಮಿಳುನಾಡು 5ನೇ ತರಗತಿ ಪಠ್ಯದಲ್ಲಿ ರಜನಿಕಾಂತ್ ‘ಜೀವನ ಪಾಠ’ !

ತಮಿಳುನಾಡು 5ನೇ ತರಗತಿ ಪಠ್ಯದಲ್ಲಿ ರಜನಿಕಾಂತ್ ‘ಜೀವನ ಪಾಠ’ !

ಚೆನ್ನೈ, ಜೂನ್ 11, 2019 (www.justkannada.in): ಸೂಪರ್ ಸ್ಟಾರ್ ರಜನೀಕಾಂತ್ ಬಗ್ಗೆ ಶಾಲೆ ಮಕ್ಕಳಿಗೆ ಪಠ್ಯದಲ್ಲಿ ಮಾಹಿತಿ ನೀಡಲಾಗಿದೆ.

ತಮಿಳುನಾಡಿನಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳ ಪಾಠ ಪುಸ್ತಕದಲ್ಲಿ ರಜನೀಕಾಂತ್ ಬಗ್ಗೆ ಪಾಠವಿದೆ. ರಜನಿ ಸಿನಿಮಾ, ರಾಜಕೀಯ ಮತ್ತು ಕ್ರೀಡೆ ಬಗ್ಗೆ ಇರುವ ಆಸಕ್ತಿ ಕುರಿತಾಗಿ ವಿವರಣೆ ನೀಡಲಾಗಿದೆ.

ಬಸ್ ಕಂಡಕ್ಟರ್ ಆಗಿದ್ದ ರಜನಿ ಬಳಿಕ ಸಿನಿಮಾ ರಂಗಕ್ಕೆ ಪ್ರವೇಶಿಸಿ ಮಿಂಚಿ ಲಕ್ಷಾಂತರ ಮಂದಿಯ ಆರಾಧ್ಯ ದೈವವಾಗಿದ್ದು ಒಂದು ಸಾಧನೆಯೇ ಸರಿ. ಈ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ.