ಮಾಧ್ಯಮಗಳ ಮೇಲೆ ಗರಂ ಆದ ಸಚಿವ ಡಿ.ಸಿ ತಮ್ಮಣ್ಣ…

ಶಿವಮೊಗ್ಗ,ಜೂ,11,2019(www.justkannada.in):  ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಮತಹಾಕದ ಹಿನ್ನೆಲೆ ಇತ್ತೀಚಿಗಷ್ಟೇ ಮಂಡ್ಯ ಜಿಲ್ಲೆಯ ಮದ್ದೂರುನಲ್ಲಿ ಗ್ರಾಮಸ್ಥರ ವಿರುದ್ದ ಕಿಡಿಕಾರಿದ್ದ ಸಚಿವ ಡಿಸಿ ತಮ್ಮಣ್ಣ ಇದೀಗ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ.

ಹೌದು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸಿ ತಮ್ಮಣ್ಣ 6  ತಿಂಗಳ ಬಳಿಕ ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದರು. ಆರು ತಿಂಗಳ ಬಳಿಕ ಜಿಲ್ಲೆಗೆ ಭೇಟಿ ನೀಡಿದ್ದ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಕಿಡಿಕಾರಿದ ಡಿಸಿ ತಮ್ಮಣ್ಣ, ನಾನು ಸಾಕಷ್ಟು ಬಾರಿ ಜಿಲ್ಲೆಗೆ ಬಂದಿದ್ದೀನಿ. ಸಭೆ ನಡೆಸಿದ್ದೀನಿ. ಕಳೆದ ಮೂರು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಇತ್ತು ಅಲ್ವಾ..? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಇತ್ತೀಚೆಗೆ ಮಂಡ್ಯ ಜಿಲ್ಲೆ ಮದ್ದೂರು ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆಗೆ ಆಗಮಿಸಿದ್ದ ಸಚಿವ ಡಿಸಿ ತಮ್ಮಣ್ಣ ಬಳಿ ಗ್ರಾಮಸ್ಥರು ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದರು. ಈ ವೇಳೆ  ಗ್ರಾಮಸ್ಥರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಡಿಸಿ ತಮ್ಮಣ್ಣ, ಅಭಿವೃದ್ದಿಗೆ ನಾವು ಬೇಕು. ವೋಟ್ ಹಾಕಲು ಅವರು ಬೇಕಾ..? ಎಂದು ಹರಿಹಾಯ್ದಿದ್ದರು.

Key words: Minister DC thammanna expressed dissatisfaction with the media.

#DC thammanna #dissatisfaction #media.