Saturday, September 19, 2026

BDA Apartments

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಇಂದಿನಿಂದ ವೈದ್ಯರ ಮುಷ್ಕರ… BDA JK_Adv BDA Adv
Home Front Page ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಇಂದಿನಿಂದ ವೈದ್ಯರ ಮುಷ್ಕರ…

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಇಂದಿನಿಂದ ವೈದ್ಯರ ಮುಷ್ಕರ…

ಬೆಂಗಳೂರು,ಸೆಪ್ಟಂಬರ್,14,2020(www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ವೈದ್ಯರು ಇಂದಿನಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ.jk-logo-justkannada-logo

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆಪ್ಟಂಬರ್ 21ರವರೆಗೆ  ವೈದ್ಯರು ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರ ವೇತನ ಹೆಚ್ಚಿಳ. ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರ ಖಾಯಂ ಮಾಡಬೇಕು. ಹಾಗೆಯೇ ಕೇರಳ ರಾಜ್ಯದಂತೆ 8 ಗಂಟೆಗಳು‌  ಕೆಲಸ ನಿರ್ವಹಿಸುವ ಪಾಳಿ ವ್ಯವಸ್ಥೆ, ಮೇಲಾಧಿಕಾರಿಗಳ ದಬ್ಬಾಳಿಕೆ ತಪ್ಪಿಸುವಂತೆ ವೈದ್ಯರು ಒತ್ತಾಯಿಸಿ  ಮುಷ್ಕರಕ್ಕೆ ಮುಂದಾಗಿದ್ದಾರೆ.

ಬೇಡಿಕೆ ಈಡೇರಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ವೈದ್ಯರು ಮನವಿ ಸಲ್ಲಿಸಲಿದ್ದು, ಬೇಡಿಕೆ ಈಡೇರದಿದ್ದರೆ ತುರ್ತು ಸೇವೆ ಹೊರತು ಪಡಿಸಿ ಇತರೆ ಸೇವೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ರೋಗಿಗಳಿಗೆ ತೊಂದರೆಯಾಗದಂತೆ ವೈದ್ಯರು ಮುಷ್ಕರ ನಡೆಸುತ್ತಿದ್ದು ಸೆಪ್ಟಂವರ್ 15ರಿಂದ ಯಾವುದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸದಿರಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ  ಕೋವಿಡ್ ವರದಿ ನೀಡದಿದ್ದಲ್ಲಿ ರಾಜ್ಯದಲ್ಲಿ ಮತ್ತಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ.

Key words: Various -demand –fulfillment-Doctors-strike – today.