Monday, September 21, 2026

BDA Apartments

ಬಕ್ರಾ ಮಾಡಿ ನನ್ನನ್ನು ಕರೆದುಕೊಂಡು ಬಂದಿದ್ದೀರಿ : ನಟಿ ಸಂಜನಾ ಆಕ್ರೋಶ BDA JK_Adv BDA...
Home Cinema ಬಕ್ರಾ ಮಾಡಿ ನನ್ನನ್ನು ಕರೆದುಕೊಂಡು ಬಂದಿದ್ದೀರಿ : ನಟಿ ಸಂಜನಾ ಆಕ್ರೋಶ

ಬಕ್ರಾ ಮಾಡಿ ನನ್ನನ್ನು ಕರೆದುಕೊಂಡು ಬಂದಿದ್ದೀರಿ : ನಟಿ ಸಂಜನಾ ಆಕ್ರೋಶ

ಬೆಂಗಳೂರು, ಸೆಪ್ಟೆಂಬರ್,10,2020(www.justkannda.in) : ಬಕ್ರಾ ಮಾಡಿ ನನ್ನನ್ನು ಕರೆದುಕೊಂಡು ಬಂದಿದ್ದೀರಿ. ಡೋಪ್ ಟೆಸ್ಟ್ ಇದೆ ಎಂದು ನನಗೆ ಹೇಳಿಲ್ಲ. ನಾನು ಯಾವುದೇ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದು ನಟಿ ಸಂಜನಾ ಗಲ್ರಾನಿ ಸಿಸಿಬಿ ಪೊಲೀಸರ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ

jk-logo-justkannada-logo

ಸಿಸಿಬಿ ಪೊಲೀಸರು ಕೆ.ಸಿ.ಜನರಲ್ ಆಸ್ಪತ್ರೆಗೆ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಆರೋಪಿಗಳಾಗಿ ಬಂಧಿಸಲಾಗಿರುವ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ  ಅವರನ್ನು ಹಲವು ಪರೀಕ್ಷೆ ಮಾಡಿಸುವ ಸಂದರ್ಭ ಸಂಜನಾ ಗಲ್ರಾನಿ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

You've-brought-Bakra-Actress-Sanjana Galrani-Outrage

ನನ್ನ ವಿರುದ್ಧ ಯಾವುದೇ ಸಾಕ್ಷಿಯಿಲ್ಲ. ನಾನು ತಪ್ಪು ಮಾಡಿಲ್ಲ. ಟ್ರೀಟ್ಮೆಂಟ್ ಅಂಥ ಕರೆದುಕೊಂಡು ಬಂದು ಡೋಪ್ ಟೆಸ್ಟ್ ಮಾಡಿಸುವುದಕ್ಕೆ ನಾನು ಒಪ್ಪುವುದಿಲ್ಲ. ಡೋಪ್ ಟೆಸ್ಟ್ ಇದೆ ಎಂದು ನನಗೆ ಹೇಳಿಲ್ಲ. ನಂಗೆ ಆರೋಗ್ಯ ಸರಿಯಿಲ್ಲ. ಎದೆ ನೋವು ಹಾಗಾಗಿ, ನಾನು ಯಾವುದೇ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದು ಸಂಜನಾ ರಂಪಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

key words : You’ve-brought-Bakra-Actress-Sanjana Galrani-Outrage