Thursday, August 13, 2026

BDA Apartments

Home Front Page ಎತ್ತಿನಹೊಳೆ ಯೋಜನೆ, ಭೂ ಸ್ವಾಧೀನ ಕುರಿತು ರೈತರ ಜತೆ ಚರ್ಚಿಸಿದ ಸಚಿವ ರಮೇಶ್ ಜಾರಕಿಹೊಳಿ….

ಎತ್ತಿನಹೊಳೆ ಯೋಜನೆ, ಭೂ ಸ್ವಾಧೀನ ಕುರಿತು ರೈತರ ಜತೆ ಚರ್ಚಿಸಿದ ಸಚಿವ ರಮೇಶ್ ಜಾರಕಿಹೊಳಿ….

ಬೆಂಗಳೂರು, ಸೆಪ್ಟಂಬರ್, 10,2020(www.justkannada.in): ಎತ್ತಿನಹೊಳೆ ಯೋಜನೆ, ಭೂ ಸ್ವಾಧೀನ ಕುರಿತು ಹಾಸನ‌ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರೊಂದಿಗೆ ರಾಜ್ಯದ ಜಲಸಂಪನ್ಮೂಲ ಸಚಿವ  ರಮೇಶ್ ಜಾರಕಿಹೊಳಿ‌ ಅವರು ಇಂದು ಚರ್ಚೆ ನಡೆಸಿದರು.jk-logo-justkannada-logo

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ‌ನಡೆದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ  ಪ್ರಗತಿ ಪರಿಶೀಲನಾ ಸಭೆಗೆ ಹಾಸನ‌ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರನ್ನು ಆಹ್ವಾನಿಸಿ, ‌ಅವರೊಂದಿಗೆ ಯೋಜನೆಯ ಭೂ ಸ್ವಾಧೀನ, ಕಾಮಗಾರಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದರು.

ಎತ್ತಿನಹೊಳೆ ಯೋಜನೆ ಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು ಮೊದಲ ಹಂತದ ಕಾಮಗಾರಿಗಳು ಮುಂದಿನ ಮೇ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ. ರೈತರು ಮತ್ತು ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಸಹಕರಿಸಿದಲ್ಲಿ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಚಿವ  ರಮೇಶ್ ಜಾರಕಿಹೊಳಿ‌ ತಿಳಿಸಿದರು.minister-ramesh-jarkiholi-discussed-farmers-ettinahole-project-land-acquisition

ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ  ರಾಕೇಶ್ ಸಿಂಗ್, ಇಲಾಖೆಯ ಕಾರ್ಯದರ್ಶಿ ಅನಿಲ್ ಕುಮಾರ್, ವಿ.ಜೆ.ಎನ್. ಎಲ್. ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ರಾವ್ ಪೇಶ್ವೆ, ರೈತ ಮುಖಂಡ ಸುರೇಂದ್ರ, ಕಾಫಿ ಬೆಳೆಗಾರರ ಸಂಘದ ಕೃಷ್ಣಪ್ಪ ಸೇರಿದಂತೆ ಹಾಸನ ಮತ್ತು ಸಕಲೇಶಪುರದ ರೈತರು ಪಾಲ್ಗೊಂಡಿದ್ದರು.

Key words: Minister Ramesh jarkiholi-discussed -farmers – ettinahole- project – land acquisition.