Tuesday, September 22, 2026

BDA Apartments

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್ BDA JK_Adv ...
Home Front Page ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್

ಬೆಂಗಳೂರು, ಸೆಪ್ಟೆಂಬರ್ 01, 2020 (www.justkannada.in): ಕೊರೊನಾ ಸೋಂಕಿತರ ತುರ್ತು ಸೇವೆಗೆ ಬೆಂಗಳೂರಿನಲ್ಲಿ ಏರ್ ಆಂಬ್ಯುಲೆನ್ಸ್ ಸಿದ್ಧಪಡಿಸಲಾಗಿದೆ.

ಬೆಂಗಳೂರಿನಿಂದ ಸೇವೆ ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಐಕಾತ್ ಮಾರ್ಕೆಟಿಂಗ್ ಮುಖ್ಯಸ್ಥ ಫಾಹಿಮ್ ಹುಸೇನ್ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಜಕ್ಕೂರು ಏರ್ ಡ್ರಮ್ಸ್ ನಿಂದ ಏರ್ ಆಂಬ್ಯುಲೆನ್ಸ್ ಸೇವೆ ಅಸ್ಥಿತ್ವಕ್ಕೆ ಬರಲಿದೆ. ಇದೇ ತಿಂಗಳಿನಿಂದ ಹಾರಾಟ ನಡೆಸಲಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಡಿಜಿ ಅವರಿಂದ ಅನುಮೋದನೆ ಪಡೆದಿರುವುದಾಗಿ ತಿಳಿಸಿದ್ದಾರೆ.