Thursday, August 6, 2026

BDA Apartments

Home Cinema ‘ಸ್ಟಾರ್’ಗಳಿಗೆ ಸಾಮಾಜಿಕ ಕಳಕಳಿ ಪ್ರಶ್ನೆ ಕೇಳಿದ ನಟ ಚೇತನ್

‘ಸ್ಟಾರ್’ಗಳಿಗೆ ಸಾಮಾಜಿಕ ಕಳಕಳಿ ಪ್ರಶ್ನೆ ಕೇಳಿದ ನಟ ಚೇತನ್

ಬೆಂಗಳೂರು, ಸೆಪ್ಟೆಂಬರ್ 01, 2020 (www.justkannada.in): ಗುಟ್ಕಾ, ಮದ್ಯ, ಜೂಜುಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್ ಗಳು ಸಾಮಾಜಿಕ ರಾಯಭಾರಿಗಳಲ್ಲವೇ? ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.

ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಹಣಕ್ಕಾಗಿ ಮದ್ಯ (ಸೋಡ) ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ), ಇನ್ನೂ ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್ ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲೇ? ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಸ್ತುತ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ ಎಂದಿದ್ದಾರೆ.