Sunday, September 20, 2026

BDA Apartments

ಷೂ ವರ್ಲ್ಡ್ : ಎರಡು ಜೊತೆ ಖರೀದಿಸಿದ್ರೆ ಒಂದು ಜೊತೆ ಉಚಿತ… BDA JK_Adv BDA Adv
Home Front Page ಷೂ ವರ್ಲ್ಡ್ : ಎರಡು ಜೊತೆ ಖರೀದಿಸಿದ್ರೆ ಒಂದು ಜೊತೆ ಉಚಿತ…

ಷೂ ವರ್ಲ್ಡ್ : ಎರಡು ಜೊತೆ ಖರೀದಿಸಿದ್ರೆ ಒಂದು ಜೊತೆ ಉಚಿತ…

ಮೈಸೂರು,ಆಗಸ್ಟ್, 29, 2020(www.justkannada.in) ; ಮೈಸೂರಿನ ಸುಪ್ರಸಿದ್ದ ಷೂ ಮತ್ತು ಫುಟ್ ವೇರ್ ಗಳ ಮಾರಾಟ ಮಳಿಗೆಯಾಗಿರುವ ಷೂ ವರ್ಲ್ಡ್ ನ ನೂತನ ಶಾಖೆಯನ್ನು ಶಿವರಾಂಪೇಟೆಯ ನಂ.1033/1, ಮನ್ನಾರ್ಸ್ ಮಾರ್ಕೆಟ್ ಎದುರು ಪ್ರಾರಂಭಿಸಲಾಗಿದೆ.mysore-Shoe World-Purchase –with- two - free - one

ಎಲ್ಲಾ ಭಾರತೀಯ, ಅಂತರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಬ್ರಾಂಡ್ ನ ಫುಟ್ ವೇರ್ ಗಳು ಇಲ್ಲಿ ಗ್ರಾಹಕರಿಗೆ ಲಭ್ಯವಿದೆ. ಸ್ಕೂಲ್, ಕಾಲೇಜುಗಳು, ಕಾರ್ಖಾನೆಗಳು, ಆಸ್ಪತ್ರೆಗಳು ಹಾಗೂ ಕ್ರೀಡಾ ಅಕಾಡೆಮಿಗಳಿಗೆ ಅತ್ಯುತ್ತಮ ಬೆಲೆಯಲ್ಲಿ ಫುಟ್ ವೇರ್ ಸರಬರಾಜು ಮಾಡಲಾಗುವುದು.

ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಆಫರ್…

ಗಣೇಶ ಹಬ್ಬದ ಪ್ರಯುಕ್ತ ಶಿವರಾಂಪೇಟೆಯ ನೂತನ ಶಾಖೆಯಲ್ಲಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದು, ಎಲ್ಲಾ ಇನ್ ಹೌಸ್ ಬ್ರಾಂಡ್ ನ ಮಹಿಳೆಯರು ಮತ್ತು ಪುರುಷರ ಪಾದರಕ್ಷೆಗಳ ಖರೀದಿಯ ಮೇಲೆ 2+1(ಖರೀದಿಸಿದಾಗ 1 ಉಚಿತ) ಆಫರ್ ನೀಡಲಾಗುತ್ತಿದೆ. ಬೇರೆ ಎಂಎನ್ ಸಿ ಬ್ರಾಂಡ್ ಹಾಗೂ ಪಾದರಕ್ಷೆಗಳ ಮೇಲೆಯೂ ಸಹಾ ಆಫರ್ ನೀಡಲಾಗುತ್ತಿದೆ.

ಎಂ.ಸಿ.ಪಿ ಮತ್ತು ಮೆಡಿಫೀಟ್ ಸಾಫ್ಟ್ ಫುಟ್ ವೇರ್ ಗಳ ಲಭ್ಯ…

ಈ ನೂತನ ಮಳಿಗೆಯಲ್ಲಿ ಅರ್ಥೋ ಡಾಕ್ಟರ್ ಗಳಿಂದ ಶಿಫಾರಸ್ಸು ಮಾಡಲ್ಪಟ್ಟ ಎಂ.ಸಿ.ಪಿ ಮತ್ತು ಮೆಡಿಫೀಟ್ ಸಾಫ್ಟ್ ಫುಟ್ ವೇರ್ ಗಳ ಲಭ್ಯವಿದ್ದು, ಇವು ಡಯಾಬಿಟಿಸ್ ಮತ್ತು ಆರ್ಥೋ ಸಮಸ್ಯೆ ಇರುವವರಿಗೆ ಸಹಕಾರಿಯಾಗಲಿದೆ. ಹಾಗೂ 499 ರೂ. ಮೇಲ್ಪಟ್ಟ ಖರೀದಿಗೆ ಉಚಿತವಾಗಿ ಮಾಸ್ಕ್ ಗಳನ್ನು ನೀಡಲಾಗುತ್ತಿದ್ದು, ಈ ಕೊಡುಗೆ ಸೆಪ್ಟಂಬರ್ 10ರವರೆಗೆ ಇರಲಿದೆ. mysore-Shoe World-Purchase –with- two - free - one

ಮೈಸೂರಿನ ಗ್ರಾಹಕರು ಈ ರಿಯಾಯಿತಿ ಬೆಲೆ ಹಾಗೂ ಆಕರ್ಷಕ ಕೊಡುಗೆಗಳ ಮಾರಾಟದ ಉಪಯೋಗ ಪಡೆಯುವುದರೊಂದಿಗೆ ತಮ್ಮ ಪಾದಗಳಿಗೆ ಆರಾಮದಾಯಕ ಹಾಗೂ ಉತ್ತಮ ಗುಣಮಟ್ಟದ ಫುಟ್ ವೇರ್ ಗಳನ್ನು ಖರೀದಿಸುವ ಸದಾವಕಾಶವನ್ನು ಉಪಯೋಗಿಸಿಕೊಳ್ಳಬಹುದು ಎಂದು ವ್ಯವಸ್ಥಾಪಕ ಎಚ್.ಎ.ರವಿಚಂದ್ರ ತಿಳಿಸಿದ್ದಾರೆ.

1998 ರಲ್ಲಿ ಅನಂತ ಶೆಟ್ಟಿ, ಅಮರ್ ನಾಥ್ ಮತ್ತು ರವಿಚಂದ್ರರವರು ರಾಮಾಸ್ವಾಮಿ ವೃತ್ತ, 100 ಅಡಿ ರಸ್ತೆಯಲ್ಲಿ ಶೂ ವರ್ಲ್ಡ್ ಅನ್ನು ಆರಂಭಿಸಿದರು.

Key words: mysore-Shoe World-Purchase –with- two – free – one.