Tuesday, September 22, 2026

BDA Apartments

ಡ್ರಗ್ಸ್ ದಂಧೆ: ಸ್ಯಾಂಡಲ್ ವುಡ್ ಗೂ ಲಿಂಕ್ ….? ಸ್ಪೋಟಕ ಮಾಹಿತಿ ಬಯಲು… BDA JK_Adv BDA Adv
Home Crime ಡ್ರಗ್ಸ್ ದಂಧೆ: ಸ್ಯಾಂಡಲ್ ವುಡ್ ಗೂ ಲಿಂಕ್ ….? ಸ್ಪೋಟಕ ಮಾಹಿತಿ ಬಯಲು…

ಡ್ರಗ್ಸ್ ದಂಧೆ: ಸ್ಯಾಂಡಲ್ ವುಡ್ ಗೂ ಲಿಂಕ್ ….? ಸ್ಪೋಟಕ ಮಾಹಿತಿ ಬಯಲು…

ಬೆಂಗಳೂರು,ಆ,27,2020(www.justkannada.in):  ಬೆಂಗಳೂರಿನಲ್ಲಿ ಇಂದು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 2ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಬೆನ್ನಲ್ಲೆ ಇದೀಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.jk-logo-justkannada-logo

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ಗೆ ಲಿಂಕ್ ಇದೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಹೌದು, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆಗಸ್ಟ್ 21 ರಂದು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಖಾಸಗಿ ಹೋಟೆಲ್ ಮೇಲೆ  ಎನ್ ಸಿಬಿ ಮತ್ತು ಸಿಸಿಬಿ ಪೊಲೀಸರು  ದಾಳಿ ನಡೆಸಿದ್ದರು. ಈ ವೇಳೆ 2.20  ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡು ಇದರ ರೂವಾರಿ ಅನಿಕಾ, ಅನೂಪ್  ಸೇರಿ ಮೂವರನ್ನ ಬಂಧಿಸಿದ್ದರು.

ಈ ನಡುವೆ ಮೂವರನ್ನ ವಶಕ್ಕೆ ಪಡೆದು ಎನ್ ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಸ್ಯಾಂಡಲ್ ವುಡ್ ನ ಕೆಲ ನಟ ನಟಿಯರು, ಸಂಗೀತ ನಿರ್ದೇಶಕರೇ ಗ್ರಾಹಕರಾಗಿದ್ದಾರೆ.  ಇವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿ ಅನಿಕಾ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಎನ್ ಸಿಬಿ ತನಿಖೆ  ಮುಂದುವರೆದಿದೆ.bangalore-drugs-link-sandalwood-explosive-information

ಇನ್ನು ಇಂದು ಆಂದ್ರದಿಂದ ಬೆಂಗಳೂರಿಗೆ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 2 ಕ್ವಿಂಟಾಲ್  ಗಾಂಜಾವನ್ನ ಸಿಸಿಬಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

Key words: Bangalore-Drugs -Link – Sandalwood –Explosive- Information