ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದ ಆರೋಪಿಗಳು ಅಂದರ್…

ಮೈಸೂರು,ಆಗಸ್ಟ್,27,2020(www.justkannada.in):  ಕೋಳಿ ಫಾರ್ಮ್ ನಲ್ಲಿ ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದ ಆರೋಪಿಗಳನ್ನ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.accused-arrest-illegal-possession-urea-mysore

ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಗ್ರಾಮದಲ್ಲಿ ಘಟನೆ‌ ನಡೆದಿದೆ. ಗ್ರಾಮದ ಜಮೀನಿನ ಕೋಳಿ ಫಾರ್ಮ್ ನಲ್ಲಿ ಕೇರಳ ಮೂಲದ ವ್ಯಕ್ತಿಗಳು ಅಕ್ರಮವಾಗಿ ಯೂರಿಯಾ ಸಂಗ್ರಹಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ  ಪಡೆದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಯೂರಿಯಾ ವಶಕ್ಕೆ ಪಡೆದಿದ್ದಾರೆ.accused-arrest-illegal-possession-urea-mysore

ವಿವಿಧ ಕಂಪನಿಗಳ ಸುಮಾರು 35 ಟನ್ ಯೂರಿಯಾ ರಸಗೊಬ್ಬರವನ್ನು ಅಕ್ರಮ ದಾಸ್ತಾನು ಮಾಡಲಾಗಿತ್ತು. ಕೃತಕ ಅಭಾವ ಸೃಷ್ಠಿಸಿ ಬಳಿಕ ಹೆಚ್ಚಿನ ದರಕ್ಕೆ ಮಾರಾಟ ಮಾಡಲು  ಯೂರಿಯಾ ಸಂಗ್ರಹಿಸಿಟ್ಟಿದ್ದರು. ರೈತರು ನೀಡಿದ್ದ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದು, ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದೆ.

Key words: accused –arrest-illegal -possession – urea-mysore