Tuesday, August 18, 2026

BDA Apartments

Home Cinema ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಕಿಚ್ಚನ ಬಾಕ್ಸಿಂಗ್ ಲುಕ್ ಪೋಸ್ಟರ್ !

ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಕಿಚ್ಚನ ಬಾಕ್ಸಿಂಗ್ ಲುಕ್ ಪೋಸ್ಟರ್ !

ಬೆಂಗಳೂರು, ಜೂನ್ 06, 2019 (www.justkannada.in): ಕಿಚ್ಚ ಸುದೀಪ್‌ ಅವರು ಬಾಕ್ಸಿಂಗ್‌ ಲುಕ್‌ನಲ್ಲಿ ಹೇಗಿರುತ್ತಾರೆ ಎಂಬ ಅಭಿಮಾನಿಗಳ ದೊಡ್ಡ ಕುತೂಹಲಕ್ಕೆ ಚಿತ್ರ ತಂಡ ನಿಧಾನವಾಗಿ ಉತ್ತರ ನೀಡುತ್ತಿದೆ.

ಇದೀಗ ಬಾಕ್ಸಿಂಗ್‌ ಲುಕ್‌ನ ಪೋಸ್ಟರ್‌ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ಇದನ್ನು ಕಂಡು ಫಿದಾ ಆಗಿದ್ದಾರೆ. ಚಿತ್ರದ ನಿರ್ದೇಶಕ ಕೃಷ್ಣ ಆಡಿಯೋ ಜತೆಗೆ ವಿತರಕರ ಪರಿಚಯವನ್ನು ಸದ್ಯದಲ್ಲೇ ಮಾಡಿಕೊಡಲಿದ್ದಾರೆ.

ಸದ್ಯದಲ್ಲೇ ಚಿತ್ರಕ್ಕೆ ಎಡಿಟಿಂಗ್‌ ಮುಗಿಯಲಿದ್ದು, ಎಲ್ಲಾ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಈವೆಂಟ್‌ ಮಾಡಿ ಆಡಿಯೋ ಬಿಡುಗಡೆ ಮಾಡುವ ಪ್ಲಾನ್‌ ಮಾಡಲಾಗಿದೆ.

ಅಂದುಕೊಂಡಂತೆ ಆದರೆ, ಏಕಕಾಲಕ್ಕೆ ಐದು ಭಾಷೆಯಲ್ಲಿ ಒಟ್ಟಿಗೆ ಆಡಿಯೋ ಅನಾವರಣಗೊಳ್ಳಲಿದೆ.