Thursday, August 13, 2026

BDA Apartments

Home Cinema ಕೊರೊನಾದಷ್ಟೇ ವೇಗವಾಗಿ ಹರಡುವ ಸುಳ್ಳು ಸುದ್ದಿ ನಂಬಬೇಡಿ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಕೊರೊನಾದಷ್ಟೇ ವೇಗವಾಗಿ ಹರಡುವ ಸುಳ್ಳು ಸುದ್ದಿ ನಂಬಬೇಡಿ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು, ಜೂನ್ 25, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೊರೋನಾಗೆ ತುತ್ತಾಗಿದ್ದಾರೆ ಎಂಬ ಸುದ್ದಿಯೊಂದು ಹರಡಿದೆ. ಈ ಕುರಿತು ಸ್ವತಃ ವಿಜಯಲಕ್ಷ್ಮೀ ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ಹರಡುವಷ್ಟೇ ವೇಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುತ್ತಿವೆ. ಈ ಕುರಿತೂ ಜಾಗೃತಿ ವಹಿಸುವುದು ಒಳ್ಳೆಯದ್ದು ಎಂದಿದ್ದಾರೆ.

ನಾನು ಕೊರೋನಾಗೆ ತುತ್ತಾಗಿದ್ದೇನೆಂಬ ಸುದ್ದಿ ಹರಡಿದೆ. ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ. ಇಂತಹ ಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷಿತರಾಗಿರಿ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.