ಜೂನಿಯರ್ ಎನ್ ಟಿಆರ್ ಜತೆ ನಟಿಸುವ ಚಾನ್ಸ್ ಪಡೆದ ನಭಾ

ಬೆಂಗಳೂರು, ಜೂನ್ 25, 2020 (www.justkannada.in): ತೆಲುಗು ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಮತ್ತೊಂದು ಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ, ವಿಶೇಷ ಎಂದರೆ ಈ ಸಿನಿಮಾದಲ್ಲಿ ಕನ್ನಡದ ನಟಿ ಚಾನ್ಸ್ ಗಿಟ್ಟಿದ್ದಾರೆ.

ಅವರ 30ನೇ ಸಿನಿಮಾದ ತಯಾರಿ ಸಹ ಭರದಿಂದ ಸಾಗಿದ್ದು, ಹಿರೋಯಿನ್ ಆಯ್ಕೆ ಪ್ರಕ್ರಿಯೆ ನಡೆದಿದೆ. , ಈ ಸಿನಿಮಾದ ನಾಯಕಿ ಪಾತ್ರಕ್ಕೆ ಕನ್ನಡದ ನಟಿ ನಭಾ ನಟೇಶ್ ಆಯ್ಕೆಯಾಗುವ ಸಾಧ್ಯತೆ ಇದೆ.

ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಮೂಲಕ ಭರ್ಜರಿ ಬ್ರೇಕ್ ಪಡೆದಿರುವ ನಭಾಗೆ ಕನ್ನಡಕ್ಕಿಂತಲೂ ತೆಲುಗಿನಲ್ಲೇ ಹೆಚ್ಚು ಅವಕಾಶಗಳು ಸಿಗಲು ಆರಂಭಿಸಿವೆ.

ಅದೇ ರೀತಿ ಅವರ ಸಂಭಾವನೆ ಕೂಡ ಏರಿಕೆ ಕಂಡಿದೆ. ಇದೀಗ ಎನ್‍ಟಿಆರ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಚಿತ್ರ ತಂಡ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.