ಭಾರೀ ಮೊತ್ತಕ್ಕೆ ಕೆಜಿಎಫ್ ತೆಲುಗು ಟಿವಿ ರೈಟ್ಸ್ ಸೇಲ್ !

ಬೆಂಗಳೂರು, ಜೂನ್ 25, 2020 (www.justkannada.in): ಕೆಜಿಎಫ್ 1 ತೆಲುಗು ರೈಟ್ಸ್ ಬಗ್ಗೆ ಹಲವು ಮಾತುಕತೆ ಬಳಿಕ ಇದೀಗ ಚಿತ್ರವನ್ನು ಸ್ಟಾರ್ ಮಾ ವಾಹಿನಿ ಖರೀದಿ ಮಾಡಿದೆ.

ಸದ್ಯದಲ್ಲೇ ಸ್ಟಾರ್ ಮಾ ಕೆಜಿಎಫ್ 1 ತೆಲುಗು ಅವತರಣಿಕೆಯನ್ನು ಪ್ರಸಾರ ಮಾಡಲಿದೆ. ಇದಕ್ಕೂ ಮೊದಲು ಸ್ಥಳೀಯ ವಾಹಿನಿಯೊಂದು ಕೆಜಿಎಫ್ 1 ಸಿನಿಮಾವನ್ನು ಅನಧಿಕೃತವಾಗಿ ರಿಲೀಸ್ ಮಾಡಿ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದ್ದು, ಭಾರೀ ಮೊತ್ತಕ್ಕೆ ಸ್ಟಾರ್ ಮಾ ಕೆಜಿಎಫ್ 1 ಹಕ್ಕು ಖರೀದಿ ಮಾಡಿದೆ ಎನ್ನಲಾಗಿದೆ.