Wednesday, July 29, 2026

BDA Apartments

Home Front Page ಕೊರೊನಾ ಭೀತಿ ಹಿನ್ನೆಲೆ: ಗೃಹ ರಕ್ಷಕ ದಳ ಸಿಬ್ಬಂದಿಗೆ ಮಾಸ್ಕ್ ವಿತರಣೆ…

ಕೊರೊನಾ ಭೀತಿ ಹಿನ್ನೆಲೆ: ಗೃಹ ರಕ್ಷಕ ದಳ ಸಿಬ್ಬಂದಿಗೆ ಮಾಸ್ಕ್ ವಿತರಣೆ…

ಮೈಸೂರು,ಜೂ,16,2020(www.justkannada.in): ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ, ನಗರದ ಗೃಹ ರಕ್ಷಕ ದಳ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು. corona-mask-distribution-home-guard-mysore

ಮೈಸೂರು ಲಿಟರರಿ ಫೋರಂ ವತಿಯಿಂದ ಮರುಬಳಕೆ ಮಾಸ್ಕ್ ಗಳನ್ನ ವಿತರಣೆ ಮಾಡಲಾಯಿತು. ಮೈಸೂರು ಲಿಟರರಿ ಫೋರಂನ ಶುಭಾ ಸಂಜಯ್  ಅವರಿಂದ ಗೃಹ ರಕ್ಷಕ ದಳದ 1000  ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಈ ಮಾಸ್ಕ್ ಗಳನ್ನು  ವಿಶೇಷವಾಗಿ ಗುಜರಾತ್‌ನಿಂದ ತರಿಸಲಾಗಿದ್ದು, ಇದು ಶುದ್ಧ ಹತ್ತಿಯಿಂದ ತಯಾರಿಸಲ್ಪಟ್ಟಿರುವ ಮಾಸ್ಕ್ ಆಗಿದೆ. ಈ ಮಾಸ್ಕ್ ಗಳು ಮರುಬಳಕೆ ಮಾಡಬಹುದಾಗಿದ್ದು ಆರು ತಿಂಗಳವರೆಗೆ ಬಳಸಬಹುದಾಗಿದೆ ಎಂದು ಮಾಸ್ಕ್ ವಿತರಣೆ ಬಳಿಕ ಮೈಸೂರು ಲಿಟರರಿ ಫೋರಂ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಹೇಳಿದರು.

ಮಾಸ್ಕ್ ವಿತರಿಸಿದ ಹಿನ್ನೆಲೆ ಟ್ರಸ್ಟ್ ಗೆ ಹೆಚ್ಚುವರಿ ಎಸ್‌ಪಿ ಸ್ನೇಹಾ ಪಿ ವಿ ಧನ್ಯವಾದ ತಿಳಿಸಿದರು.

Key words: Corona – Mask-Distribution – Home Guard -mysore