ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿ…

ಬೀದರ್,ಜೂ,16,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಈ ನಡುವೆ ಇಂದು ಕೊರೋನಾ ಸೋಂಕಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ.

ಬೀದರ್ ನ 45 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದು ಈ ಬಗ್ಗೆ ಜಿಲ್ಲಾಡಳಿತ ಈ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 45 ವರ್ಷದ ವ್ಯಕ್ತಿ ಕಿಡ್ನಿ ಸಮಸ್ಯೆಯಿಂದ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೊರೋನಾ ಟೆಸ್ಟ್ ವೇಳೆ ಸೋಂಕು ಇರುವುದು ದೃಢಪಟ್ಟು ಬ್ರಿಮ್ಸ್ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.another-death-coronavirus-infection-state

ಇದೀಗ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೀದರ್ ನಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮೃತ ವ್ಯಕ್ತಿಗೆ ಮೆಡಿಕಲ್ ಶಾಪ್ ಇತ್ತು ಎನ್ನಲಾಗಿದೆ.

Key words: Another –death-coronavirus- infection – state.