ಇಂದಿನಿಂದ ಅಂತರಾಜ್ಯ ಕೆಎಸ್ಆರ್ ಟಿಸಿ ಬಸ್ ಸಂಚಾರ ಪುನಾರಂಭ…

ಬೆಂಗಳೂರು,ಜೂ,17,2020(www.justkannada.in): ಮಹಾಮಾರಿ ಕೊರೊನಾದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಮಾಡಿದ ಹಿನ್ನೆಲೆ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿಸಿ ಅಂತರಾಜ್ಯ ಬಸ್ ಸಂಚಾರ ಇಂದಿನಿಂದ ಪುನಾರಂಭಿದೆ.

ಕರೊನಾ ಭೀತಿ ಹಿನ್ನೆಲೆಯಲ್ಲಿ ಅಂತರಾಜ್ಯ ಬಸ್ ಸೇವೆಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು.  ಇದೀಗ ಇಂದಿನಿಂದ ಅಂತರಾಜ್ಯ ಬಸ್ ಸಂಚಾರ ಪುನರಾರಂಭವಾಗಲಿದ್ದು ಮೊದಲನೇ ಹಂತದಲ್ಲಿ  ರಾಜ್ಯ ಸಾರಿಗೆ ಬಸ್ಸುಗಳು ಆಂಧ್ರಪ್ರದೇಶಕ್ಕೆ ಕಾರ್ಯಾಚರಣೆ ನಡೆಸಲಿವೆ.

ಈ ಮೂಲಕ ಕೆಎಸ್ ಆರ್ ಟಿಸಿ ಹಂತ ಹಂತವಾಗಿ ಬಸ್ ಸಂಚಾರ ಸೇವೆಗಳನ್ನು ವಿಸ್ತರಿಸುತ್ತಿದ್ದು, ನಂತರದ ದಿನಗಳಲ್ಲಿ ಪರಿಸ್ಥಿತಿ ಅವಲೋಕನ ಬಳಿಕ ಇತರೆ ನೆರೆ ರಾಜ್ಯಗಳ ಬಸ್ ಕಾರ್ಯಾಚರಣೆಗೆ ಚಿಂತನೆ ನಡೆಸಿದೆ.

Key words: Interstate –KSRTC- Bus – Restart