Friday, August 7, 2026

BDA Apartments

Home Crime ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆ: ಪರಿಶೀಲನೆ

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆ: ಪರಿಶೀಲನೆ

ಬೆಂಗಳೂರು,ಮೇ,31,2019(www.justkannada.in):  ಬೆಂಗಳೂರಿನ  ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾಗಿದ್ದು ಆರ್ ಎಎಫ್ ಮತ್ತು ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ರೈಲು ನಿಲ್ದಾಣದ ಫ್ಲಾಟ್‌ ನಂಬರ್‌ 1ರಲ್ಲಿ ಗ್ರೇನೆಡ್ ಮಾದರಿಯ ಅನುಮಾನಸ್ಪದ ವಸ್ತು ಪತ್ತೆಯಾಗಿದೆ. ಬಾಂಬ್  ವದಂತಿ ಹಿನ್ನೆಲೆ  ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಜನರಲ್ಲಿ ಆತಂಕದ ವಾತವಾರಣ  ‍ನಿರ್ಮಾಣವಾಗಿದ್ದು, ಕೆಲವು ರೈಲುಗಳ ಸಂಚಾರವನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸಲಾಗಿದೆ.

ಇನ್ನು ಅನುಮಾನಸ್ಪದ ವಸ್ತು ಪತ್ತೆಯಾಗಿರುವ ಸ್ಥಳಕ್ಕೆ ಬಾಂಬ್ ಪತ್ತೆದಳ, ಬಾಂಬ್‌ ನಿಷ್ಕ್ರೀಯ ದಳ ದೌಡಾಯಿಸಿದ್ದು,  ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾ ರೈಲುಗಳನ್ನ ತಪಾಸಣೆ ಮಾಡಲಾಗುತ್ತಿದೆ.

Key words: Finding suspicious material at the Sangulli Rayanna railway station in Bangalore.

 

#railway station #Bangalore #suspicious #things