Sunday, September 20, 2026

BDA Apartments

ಪ್ರತಾಪ್ ಸಿಂಹ, ರಾಮದಾಸ್ ಎಂತಹ ಕೊರೊನಾ ವಾರಿಯರ್ಸ್ ?!: ಎಂ.ಲಕ್ಷ್ಮಣ್ ವ್ಯಂಗ್ಯ B...
Home Front Page ಪ್ರತಾಪ್ ಸಿಂಹ, ರಾಮದಾಸ್ ಎಂತಹ ಕೊರೊನಾ ವಾರಿಯರ್ಸ್ ?!: ಎಂ.ಲಕ್ಷ್ಮಣ್ ವ್ಯಂಗ್ಯ

ಪ್ರತಾಪ್ ಸಿಂಹ, ರಾಮದಾಸ್ ಎಂತಹ ಕೊರೊನಾ ವಾರಿಯರ್ಸ್ ?!: ಎಂ.ಲಕ್ಷ್ಮಣ್ ವ್ಯಂಗ್ಯ

ಮೈಸೂರು, ಮೇ 23, 2020 (www.justkannada.in): ಸಿಎಂ ಯಡಿಯೂರಪ್ಪ ಅಧಿಕಾರಾವಧಿ ಕೇವಲ ಇನ್ನು 6 ತಿಂಗಳು ಮಾತ್ರ. ಬಿಜೆಪಿಯವರೇ ಅವರನ್ನು ಕೆಳಗಿಳಿಸುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಹಾಗೂ ಕೇಂದ್ರ ಅಧಿಕಾರಾವಧಿ ಇನ್ನು ಕೆಲವೇ ಅವಧಿಗಳು ಮಾತ್ರ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದ್ದೀರಾ. ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದರು.

ಎಲ್ಲದರಲ್ಲೂ ಪ್ರತಾಪ್ ಸಿಂಹ ಫೋಟೋ ಕಾಣುತ್ತಿದೆ. ಪ್ರತಾಪ್ ಸಿಂಹ ಯಾವ ರೀತಿಯ ಕರೊನಾ ವಾರಿಯರ್ಸ್? ಮೈಸೂರಿಗೆ ಪ್ರತಾಪ್ ಸಿಂಹನ ಕೊಡುಗೆ ಏನು..? ಮೈಸೂರಿಗೆ ರಾಮದಾಸ್ ಕೊಡುಗೆ ಏನು..? ಎಂದು ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.