Thursday, August 6, 2026

BDA Apartments

Home Front Page ಮೈಸೂರು ಜಿಲ್ಲಾ ಉಸ್ತುವಾರಿಗೆ ಮೈಸೂರು ಜಿಲ್ಲಾ ಬಿಜೆಪಿಯಿಂದ ಅಭಿನಂದನೆ

ಮೈಸೂರು ಜಿಲ್ಲಾ ಉಸ್ತುವಾರಿಗೆ ಮೈಸೂರು ಜಿಲ್ಲಾ ಬಿಜೆಪಿಯಿಂದ ಅಭಿನಂದನೆ

ಮೈಸೂರು, ಏಪ್ರಿಲ್ 11, 2020 (www.justkannada.in):
ಸಹಕಾರ ಸಚಿವರೂ ಆದ ನೂತನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರವರನ್ನು ಜಿಲ್ಲೆಯ ಬಿಜೆಪಿ ಮುಖಂಡರು ಇಂದು ಸರ್ಕಾರಿ ಭವನದಲ್ಲಿ ಭೇಟಿಯಾಗಿ ಅಭಿನಂದಿಸಿ ಗೌರವಿಸಿದರು.

ಮಾತನಾಡಿದ ಸಚಿವರು, ಪ್ರಸ್ತುತ ಕೊರಾನಾ ಕಂಟಕ ಮೈಸೂರು ಜಿಲ್ಲೆಗೆ ಹೆಚ್ಚಿನ ಆತಂಕ ತಂದೊಡ್ಡಿದ್ದು ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತಕ್ಕೆ ಜನತೆ ಜಾಗೃತ ಸಹಕಾರ ನೀಡುವಂತೆ ಹಾಗೂ ನಾಗರಿಕರ ಅವಶ್ಯಕತೆ ಹಾಗೂ ತೊಂದರೆಗಳನ್ನು ನಿವಾರಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವುದಾಗಿ‌ ತಿಳಿಸಿದರು.

ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿಕ್ಕೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಂದ್ರ, ಮಾಜಿ ಸಚಿವ ಎಂ.ಶಿವಣ್ಣ, ರಾಜ್ಯ ಬಿಜೆಪಿ ಕಾರ್ಯದರ್ಶಿ ರಾಜೇಂದ್ರ,  ರಾಜ್ಯ ಸಹ-ವಕ್ತಾರ ಆರ್.ರಘು( ಕೌಟಿಲ್ಯ), ಮುಖಂಡರುಗಳಾದ ಮಹದೇವಯ್ಯ, ಜಯಪ್ರಕಾಶ್, ಕಾರ್ಪೋರೇಟರ್ ಸತೀಷ್, ಬ್ರಹ್ಮಾಚಾರ್
ಮೊದಲಾದವರು ಹಾಜರಿದ್ದರು.